alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಇಳಿಕೆಯಾಯ್ತು ಶಸ್ತ್ರ ಚಿಕಿತ್ಸೆ ವೆಚ್ಚ

anant-minister

ನವದೆಹಲಿ: ಈ ಹಿಂದೆ ಸ್ಟೆಂಟ್ ಬೆಲೆಯನ್ನು ಇಳಿಕೆ ಮಾಡುವ ಮೂಲಕ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದವರಿಗೆ ನೆಮ್ಮದಿ ತಂದಿದ್ದ ಕೇಂದ್ರ ಸರ್ಕಾರ, ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ಮಹತ್ವದ ಕ್ರಮವನ್ನು ಕೈಗೊಂಡಿದೆ.

ಶಸ್ತ್ರ ಚಿಕಿತ್ಸೆ ದರಗಳನ್ನು ಭಾರೀ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ. ಕ್ಯಾನ್ಸರ್, ಟ್ಯೂಮರ್ ಶಸ್ತ್ರ ಚಿಕಿತ್ಸೆಗೆ 1,13,950 ರೂ. ನಿಗದಿ ಮಾಡಲಾಗಿದೆ. ಸದ್ಯ ಈ ಚಿಕಿತ್ಸೆಗಳಿಗೆ 2.75 ಲಕ್ಷ ರೂ.ನಿಂದ 9 ಲಕ್ಷ ರೂ. ವೆಚ್ಚವಾಗುತ್ತಿದೆ.

ಕೋಬಾಲ್ಟ್ ಕ್ರೋಮಿಯಂ ಮೊಣಕಾಲು ಶಸ್ತ್ರ ಚಿಕಿತ್ಸೆಗೆ 54,720 ರೂ. ನಿಗದಿ ಮಾಡಲಾಗಿದೆ. ಈ ಚಿಕಿತ್ಸೆಗೆ ಪ್ರಸ್ತುತ 1,58,324 ರೂ ವೆಚ್ಚವಾಗುತ್ತದೆ.

ಇನ್ನು ಟೈಟಾನಿಯಂ ಅಕ್ಸಿಡೈಸ್ಟ್ ಝಿಂಕೋನಿಯಂ ಶಸ್ತ್ರ ಚಿಕಿತ್ಸೆಗೆ 76,600 ರೂ. ನಿಗದಿ ಮಾಡಲಾಗಿದೆ. ಪ್ರಸ್ತುತ ಈ ಶಸ್ತ್ರ ಚಿಕಿತ್ಸೆಗಳಿಗೆ 2.5 ಲಕ್ಷ ರೂ.ನಿಂದ 4.5 ಲಕ್ಷ ರೂ. ವೆಚ್ಚವಾಗುತ್ತದೆ.

ಹೈ ಫ್ಲೆಕ್ಸಿಬಿಲಿಟಿ ಕಸಿಗೆ 56,940 ರೂ. ನಿಗದಿ ಮಾಡಲಾಗಿದೆ. ಸದ್ಯ ಈ ಚಿಕಿತ್ಸೆಗೆ 1.80 ಲಕ್ಷ ರೂ. ವೆಚ್ಚವಾಗುತ್ತಿದೆ. ದರ ನಿಗದಿಯನ್ನು ಉಲ್ಲಂಘಿಸುವ ಆಸ್ಪತ್ರೆಗಳು ಮತ್ತು ವೈದ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...