alex Certify
ಕನ್ನಡ ದುನಿಯಾ       Mobile App
       

Kannada Duniya

ಗಮನಿಸಿ: “ಆಧಾರ್” ಬಗ್ಗೆ ಸರ್ಕಾರದಿಂದ ಮಹತ್ವದ ನಿರ್ಧಾರ

ಭಾರತ ಸರ್ಕಾರ ಮಹತ್ವದ ಕೆಲಸವೊಂದಕ್ಕೆ ಕೈ ಹಾಕಿದೆ. ನಾಗರೀಕರು ಬಯಸಿದ್ರೆ ಆಧಾರ್ ವ್ಯವಸ್ಥೆಯಿಂದ ಸಂಪೂರ್ಣ ಹೊರಗೆ ಬರಬಹುದಾಗಿದೆ. ಆಧಾರ್ ಕಾರ್ಡ್ ನಿಂದ ನಿಮ್ಮ ಹೆಸರು ತೆಗೆಯುತ್ತಿದ್ದಂತೆ ಬಳಕೆದಾರರ ಡೇಟಾ ಶಾಶ್ವತವಾಗಿ ಅಳಿಸಿ ಹೋಗುತ್ತದೆ. ಆದ್ರೆ ಇನ್ನೊಬ್ಬರ ಆಧಾರ್ ರದ್ದು ಮಾಡುವ ಹಕ್ಕು ಬೇರೆಯವರಿಗಿರುವುದಿಲ್ಲ.

ಸುಪ್ರೀಂ ಕೋರ್ಟ್ ಕೆಲ ತಿಂಗಳ ಹಿಂದೆ ಆಧಾರ್ ಕಾರ್ಡ್ ಬಗ್ಗೆ ಮಹತ್ವದ ತೀರ್ಪು ನೀಡಿದೆ. ಖಾಸಗಿ ಕಂಪನಿಗಳಿಗೆ ಆಧಾರ್ ಅನಿವಾರ್ಯವಲ್ಲ ಎಂದಿದೆ. ಇದಾದ ನಂತ್ರ ಕೇಂದ್ರ ಸರ್ಕಾರ, ಆಧಾರ್ ರದ್ದಿನ ಬಗ್ಗೆ ಮಹತ್ವದ ತೀರ್ಮಾನ ತೆಗೆದುಕೊಳ್ತಿದೆ.

ಈಗಾಗಲೇ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸಿದ್ದರೆ ಮಕ್ಕಳಿಗೆ 18 ವರ್ಷವಾಗುವವರೆಗೆ ರದ್ದು ಮಾಡುವಂತಿಲ್ಲ. 18 ವರ್ಷ ತುಂಬಿದ ಮೇಲೆ ಸರ್ಕಾರ 6 ತಿಂಗಳ ಸಮಯ ನೀಡಲಿದೆ. 6 ತಿಂಗಳೊಳಗೆ ಆಧಾರ್ ಬೇಕಾ?ಬೇಡ್ವಾ? ಎಂಬ ನಿರ್ಧಾರವನ್ನು ಕೈಗೊಳ್ಳಬಹುದು.

ವರದಿ ಪ್ರಕಾರ, ಭಾರತ ಸರ್ಕಾರ ಈವರೆಗೆ 37.50 ಕೋಟಿ ಪಾನ್ ಕಾರ್ಡ್ ನೀಡಿದೆ. ಅದ್ರಲ್ಲಿ 16.84 ಮಂದಿ ಮಾತ್ರ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಜೋಡಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...