alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿ ತಿಂಗಳ 9 ರಂದು ‘ಸುರಕ್ಷಿತ ಮಾತೃತ್ವ ಅಭಿಯಾನ’

surakshit-matritva-abhiyanನವದೆಹಲಿ: ಇನ್ನು ಪ್ರತಿ ತಿಂಗಳ 9ನೇ ತಾರೀಕಿನಂದು ದೇಶದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ  ಗರ್ಭಿಣಿಯರಿಗೆ ಉಚಿತ ತಪಾಸಣೆ ಹಮ್ಮಿಕೊಳ್ಳಲಾಗುತ್ತದೆ. ‘ಪ್ರಧಾನ ಮಂತ್ರಿ ಸುರಕ್ಷಿತಾ ಮಾತೃತ್ವ ಅಭಿಯಾನ’ ದಲ್ಲಿ ಈ ಉಚಿತ ಸೇವೆ ದೇಶಾದ್ಯಂತ ನಡೆಯಲಿದೆ.

ಆಕಾಶವಾಣಿಯ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಪ್ರತಿ ವರ್ಷ 3 ಕೋಟಿ ಮಹಿಳೆಯರು ಗರ್ಭವತಿಯಾಗುತ್ತಾರೆ. ಈ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯಲಾಗದೆ ಕೆಲವರು ಸಾವಿಗೀಡಾಗುತ್ತಾರೆ. ಇಲ್ಲವೇ ಮಗು ಅಪಾಯಕ್ಕೆ ಸಿಲುಕುತ್ತದೆ. ಹಾಗಾಗಿ ಉಚಿತ ತಪಾಸಣೆಯ ಪ್ರಯೋಜನವನ್ನು ಎಲ್ಲ ಗರ್ಭಿಣಿಯರೂ ಪಡೆದುಕೊಳ್ಳಬೇಕೆಂದು ಹೇಳಿದ್ದಾರೆ.

ಈ ‘ಸುರಕ್ಷಿತಾ ಮಾತೃತ್ವ ಅಭಿಯಾನ’ದಿಂದ ಬಡ ಮಹಿಳೆಯರಿಗೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಹೇಳಿದ ಮೋದಿಯವರು, ಹಲವು ಕಡೆ ಮಳೆ ತೀವ್ರವಾಗಿರುವುದರಿಂದ ರೋಗಗಳು ಹರಡುತ್ತಿವೆ. ವೈದ್ಯರ ಸಲಹೆಯಿಲ್ಲದೇ ಯಾವುದೇ ಆ್ಯಂಟಿಬಯೋಟಿಕ್ ಸೇವಿಸಬೇಡಿ. ರೋಗಗಳಿಂದ ದೂರವಿರಿ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...