alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡಿದು ಶಾಲೆಗೆ ಬಂದ ಶಿಕ್ಷಕ ಮಾಡಿದ್ದೇನು ಗೊತ್ತಾ?

ಅಸ್ಸಾಂ ಸರ್ಕಾರಿ ಶಾಲೆ ಶಿಕ್ಷಕನೊಬ್ಬನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಡಿದ ಮತ್ತಿನಲ್ಲಿ ಶಾಲೆಗೆ ಬಂದ ಶಿಕ್ಷಕ ಮಕ್ಕಳ ಮುಂದೆ ಮನಸ್ಸಿಗೆ ಬಂದಂತೆ ನೃತ್ಯ ಮಾಡಿದ್ದಾನೆ. ಇದನ್ನು ವಿಡಿಯೋ ಮಾಡಿದ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಹೋಜಾಯ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕ ಪ್ರವೀಣ್ ಕುಮಾರ್ ದಾಸ್ ಈ ಕೆಲಸ ಮಾಡಿದ್ದಾನೆ. ಮಕ್ಕಳಿಗೆ ಗಣಿತ, ವಿಜ್ಞಾನ ಹೇಳಿಕೊಡಬೇಕಿದ್ದ ಶಿಕ್ಷಕನೇ ದಾರಿ ತಪ್ಪಿದ್ದಾನೆ. ಶಾಲೆ ಮುಖ್ಯೋಪಾದ್ಯಾಯರು ಹಾಗೂ ಮಕ್ಕಳಿಗೂ ತನ್ನ ಜೊತೆ ಡಾನ್ಸ್ ಮಾಡುವಂತೆ ಶಿಕ್ಷಕ ಒತ್ತಾಯಿಸಿದ್ದಾನೆ.

ಈ ಹಿಂದೆ ಕೂಡ ಶಿಕ್ಷಕ ಶಾಲೆಗೆ ಮದ್ಯಪಾನ ಮಾಡಿ ಬಂದಿದ್ದ ಎನ್ನಲಾಗಿದೆ. ಸಹ ಶಿಕ್ಷಕರು ಹಾಗೂ ಪಾಲಕರು ಬುದ್ದಿ ಹೇಳಿದ್ರೂ ಶಿಕ್ಷಕ ತನ್ನ ಚಟ ಬಿಟ್ಟಿರಲಿಲ್ಲ. ಸೋಮವಾರ ಶಿಕ್ಷಕ ಎಲ್ಲೆ ಮೀರಿದ್ದ. ವಿಡಿಯೋ ವೈರಲ್ ಆಗ್ತಿದ್ದಂತೆ ಶಿಕ್ಷಕ ಪರಾರಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...