alex Certify
ಕನ್ನಡ ದುನಿಯಾ       Mobile App
       

Kannada Duniya

ಶಿಕ್ಷಕನಿಗೆ ದುಬಾರಿಯಾಯ್ತು ಬಯಲು ಪ್ರದೇಶದಲ್ಲಿ ಮಲ ವಿಸರ್ಜನೆ

ಭ್ರಷ್ಟಾಚಾರ, ನಿರ್ಲಕ್ಷ್ಯ, ಲಂಚ ಪ್ರಕರಣದಲ್ಲಿ ಸರ್ಕಾರಿ ನೌಕರರು ಅಮಾನತುಗೊಂಡಿರುವ ಪ್ರಕರಣಗಳು ಸಾಕಷ್ಟಿವೆ. ಆದ್ರೆ ಮಧ್ಯಪ್ರದೇಶದಲ್ಲಿ ವಿಚಿತ್ರ ಕಾರಣಕ್ಕೆ ಶಿಕ್ಷಕನೊಬ್ಬನನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.

ಮಧ್ಯಪ್ರದೇಶದ ಅಶೋಕನಗರ ಸರ್ಕಾರಿ ಶಾಲೆಯ ಮಹೇಂದ್ರ ಸಿಂಗ್ ಅಮಾನತಾಗಿರುವ ಶಿಕ್ಷಕ. ಈ ಶಿಕ್ಷಕ ಬಯಲು  ಪ್ರದೇಶದಲ್ಲಿ ಶೌಚ ಮಾಡಿದ್ದೇ ಅಮಾನತಿಗೆ ಕಾರಣವಾಗಿದೆ. ಜಿಲ್ಲಾ ಶಿಕ್ಷಣ ಅಧಿಕಾರಿಗಳು ಹಾಗೂ ಹೆಚ್ಚುವರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಈ ಆದೇಶ ನೀಡಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸ್ವಚ್ಛ ಭಾರತ ಅಭಿಯಾನವನ್ನು ಉಲ್ಲಂಘಿಸಿ ಮನೆಯ ಶೌಚಾಲಯ ಬಳಸುವ ಬದಲು ಬಯಲಿನಲ್ಲಿ ಶೌಚ ಮಾಡಲಾಗಿದೆ. ಇದು ಸರ್ಕಾರಿ ಯೋಜನೆಯ ಉಲ್ಲಂಘನೆಯಾಗಿದೆ ಎಂದು ಅಮಾನತು ಆದೇಶದಲ್ಲಿ ಉಲ್ಲೇಖನ ಮಾಡಲಾಗಿದೆ.

ಬಹುಶಃ ಮಧ್ಯಪ್ರದೇಶದಲ್ಲೊಂದೇ ಅಲ್ಲ ಬಯಲು ಪ್ರದೇಶದಲ್ಲಿ ಶೌಚ ಮಾಡಿದ್ದಕ್ಕೆ ಅಮಾನತು ಮಾಡಿದ ದೇಶದ ಮೊದಲ ಪ್ರಕರಣ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...