alex Certify
ಕನ್ನಡ ದುನಿಯಾ       Mobile App
       

Kannada Duniya

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಬೇಡಿ –ಸುಪ್ರೀಂಗೆ ಕೇಂದ್ರದ ಮನವಿ

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ನುಡಿಸುವ ಹಾಗೂ ಎದ್ದು ನಿಂತು ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಅನಿವಾರ್ಯವಾಗುವ ಸಾಧ್ಯತೆ ಕಡಿಮೆಯಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಅಫಿಡೆವಿಟ್ ಒಂದನ್ನು ಸಲ್ಲಿಸಿದೆ. ಇದ್ರಲ್ಲಿ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ನುಡಿಸುವುದನ್ನು ಕಡ್ಡಾಯಗೊಳಿಸಬೇಡಿ ಎಂದಿದೆ.

ಈಗಾಗಲೇ ರಚನೆಯಾಗಿರುವ ಸಚಿವಾಲಯ ಸಮಿತಿ ಹೊಸ ನಿಯಮದ ಬಗ್ಗೆ ವಿಚಾರ ನಡೆಸುತ್ತಿದೆ ಎಂದೂ ಸರ್ಕಾರ, ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಹೇಳಿದೆ. ಸುಪ್ರೀಂ ಕೋರ್ಟ್ ಮುಂದಿನ ಆದೇಶದವರೆಗೆ ಹಾಗೂ ಸಚಿವಾಲಯ ಸಮಿತಿ ಅಂತಿಮ ವರದಿ ಬರುವವರೆಗೆ ಥಿಯೇಟರ್ ನಲ್ಲಿ ರಾಷ್ಟ್ರಗೀತೆ ಕೇಳಿ ಬರಲಿದೆ.

2016ರಲ್ಲಿ ಸುಪ್ರೀಂ ನೀಡಿದ ಆದೇಶವನ್ನು ಸರಳಗೊಳಿಸುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ವಿನಾಯಿತಿ ನೀಡಬೇಕೆಂದು ಕೇಂದ್ರ ಸಲ್ಲಿಸಿದ ಅಫಿಡೆವಿಟ್ ನಲ್ಲಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...