alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿದಿನ 400 ಮಂದಿ ಮನೆಗೆ ವಾಪಸ್ಸಾಗುವುದೇ ಇಲ್ಲ…!

ಜಾಗತಿಕವಾಗಿ ಭಾರತದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕಳವಳ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಾರ್ಷಿಕವಾಗಿ 1.5 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ದಿನನಿತ್ಯ ಲಕ್ಷಾಂತರ ಮಂದಿ ರಸ್ತೆಯಲ್ಲಿ ಓಡಾಡುತ್ತಾರೆ, ಆದರೆ 400 ಮಂದಿ ಮನೆಗೆ ವಾಪಸ್ಸಾಗುವುದೇ ಇಲ್ಲ ಎಂದು ಅಪಘಾತ ಪ್ರಕರಣಗಳ ತೀವ್ರತೆಯನ್ನು ಬಿಡಿಸಿಟ್ಟರು.

ಅಪಘಾತ ನಿಯಂತ್ರಿಸಲು ರಸ್ತೆ ಇಂಜಿನಿಯರಿಂಗ್ ನಲ್ಲಿ ತಿದ್ದುಪಡಿ, ಚಾಲಕರಿಗೆ ತರಬೇತಿ, ಸುರಕ್ಷಿತ ವಾಹನ ವಿನ್ಯಾಸ, ತೊಂದರೆ ಮಾಡುತ್ತಿರುವ ಪ್ರದೇಶಗಳನ್ನು ಗುರುತಿಸಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಎಕಾನಮಿ ವಾಹನಗಳಲ್ಲೂ ಏರ್ ಬ್ಯಾಗ್ ಆಳವಡಿಕೆ ಕಡ್ಡಾಯ ಮಾಡಿದ್ದೇವೆ ಎಂದರು.

ಒಬ್ಬ ವ್ಯಕ್ತಿ ವಿವಿಧ ಪ್ರಾಧಿಕಾರಗಳಿಂದ ಪಡೆದುಕೊಂಡಿರುವ ಚಾಲನಾ ಪರವಾನಗಿಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಡೇಟಾಬೇಸ್ ಸಿದ್ಧಪಡಿಸಲಾರಂಭಿಸಿದೆ. ಭಾರತದಲ್ಲಿ ಪರವಾನಗಿ ಪಡೆದುಕೊಳ್ಳುವುದು ಅತಿ ಸುಲಭ. ವಿವಿಧ ರಾಜ್ಯಗಳ ಸಾರಿಗೆ ಪ್ರಾಧಿಕಾರಗಳಿಂದ ಲೈಸೆನ್ಸ್ ಪಡೆದವರು ಇದ್ದಾರೆ. ಇಂಥವುಗಳ ಪರಿಶೀಲನೆಯಾಗಬೇಕಾಗಿದೆ ಎಂದಿದ್ದಾರೆ.

ಪರೀಕ್ಷೆಗಳಿಲ್ಲದೇ ಚಾಲನಾ ಪರವಾನಗಿ ಕೊಡುವುದರಿಂದ ಹೆಚ್ಚೆಚ್ಚು ಅಪಘಾತ ನಡೆಯುತ್ತಿದೆ. ಈ ಬೆಳವಣಿಗೆ ನಿಯಂತ್ರಿಬೇಕಾಗಿದೆ ಎಂದ ಅವರು, ಇದೇ ವೇಳೆ ಕೇಂದ್ರ ಸರ್ಕಾರ ಬಹು ಚಾಲನಾ ತರಬೇತಿ ಕೇಂದ್ರವನ್ನು ಸ್ಥಾಪಿಸುತ್ತಿದೆ ಎಂದು ವಿವರಿಸಿದರು.

ಭಾರತವು ಕನಿಷ್ಠ 22 ಲಕ್ಷ ಚಾಲಕರ ಕೊರತೆ ಅನುಭವಿಸುತ್ತಿದೆ. ಈ ಕೊರತೆ ತುಂಬಲು ಕೌಶಲಯುತ ಮಾನವ ಸಂಪನ್ಮೂಲ ಸೃಷ್ಟಿಸಬೇಕಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಚಾಲಕ ರಹಿತ ಕಾರುಗಳಿಗೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ, ಇಲ್ಲಿನ ಯುವಕರು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...