alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ನಿಲ್ದಾಣದಲ್ಲಿ ಶುರುವಾಗಲಿದೆ ಔಷಧಿ ಮಳಿಗೆ

railway-jpg22_1494596434_749x421

ಶ್ರೀಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ನೀಡುವ ನಿಟ್ಟಿನಲ್ಲಿ ಸರ್ಕಾರ ಇನ್ನೊಂದು ಹೆಜ್ಜೆ ಇಡಲು ಮುಂದಾಗಿದೆ. ಸರ್ಕಾರ ಸುಮಾರು 1 ಸಾವಿರ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್ ತೆರೆಯುವ ಯೋಜನೆ ಬಗ್ಗೆ ಚಿಂತನೆ ನಡೆಸುತ್ತಿದೆ.

ವಿವಿಧ ರಾಜ್ಯಗಳಲ್ಲಿ ಬಸ್ ನಿಲ್ದಾಣಗಳ ಬಳಿ ಔಷಧಿ ಅಂಗಡಿ ತೆರೆಯಲಾಗುತ್ತಿದೆ. ಬಹುಬೇಗ ಈ ಕಾರ್ಯ ಮುಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡ್ತಾ ಇದೆ. ಮುಂದಿನ ದಿನಗಳಲ್ಲಿ 1 ಸಾವಿರ ರೈಲ್ವೆ ನಿಲ್ದಾಣಗಳಲ್ಲಿ ಔಷಧಿ ಅಂಗಡಿ ತೆರೆಯುವ ಬಗ್ಗೆ ರೈಲ್ವೆ ಸಚಿವ ಸುರೇಶ್ ಪ್ರಭು ಜೊತೆ ಮಾತುಕತೆ ನಡೆಸಲಾಗುವುದು ಎಂದು ಸಚಿವ ಅನಂತ್ ಕುಮಾರ್ ಹೇಳಿದ್ದಾರೆ.

ಹಳ್ಳಿಯ ಜನರಿಗೆ ಹಾಗೂ ಬಡವರಿಗೆ ಸುಲಭವಾಗಿ ಔಷಧಿಗಳು ಸಿಗುವ ಉದ್ದೇಶದಿಂದ ಬಸ್ ನಿಲ್ದಾಣದ ಬಳಿ ಔಷಧಿ ಅಂಗಡಿ ತೆರೆಯುವ ಪ್ರಯತ್ನದಲ್ಲಿದ್ದೇವೆ. ಈ ಬಗ್ಗೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತ್ರ ಔಷಧಿ ಮಳಿಗೆಗಳ ಸಂಖ್ಯೆ 1320ಕ್ಕೇರಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಸಂಖ್ಯೆ 88 ಇತ್ತು. ಈ ವರ್ಷಾಂತ್ಯದಲ್ಲಿ ಈ ಸಂಖ್ಯೆ 3000ಕ್ಕೇರಲಿದ್ದು, ವೈದ್ಯಕೀಯ ಮಳಿಗೆಗಳ ವ್ಯವಹಾರ 60 ಕೋಟಿ ರೂ. ತಲುಪಲಿದೆ ಎಂದು ಅನಂತ್ ಕುಮಾರ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...