alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಜಾನುವಾರು ಸಾಕಲೂ ತೆರಿಗೆ ಕಟ್ಟಬೇಕು

ಪಂಜಾಬ್ ಸರ್ಕಾರ ಜಾನುವಾರುಗಳನ್ನು ಸಾಕುವ ಜನರಿಗೆ ಒಂದು ಶಾಕಿಂಗ್ ನ್ಯೂಸ್ ನೀಡಿದೆ. ಮನೆಯಲ್ಲಿ ಸಾಕುವ ಜಾನುವಾರುಗಳಿಗೆ ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಪಂಜಾಬಿನಲ್ಲಿ ವಾಸವಾಗಿದ್ದು, ಜಾನುವಾರು ಸಾಕುತ್ತಿರುವವರು ಇನ್ಮುಂದೆ ತೆರಿಗೆ ನೀಡಬೇಕಾಗುತ್ತದೆ.

ಸ್ಥಳೀಯ ಆಡಳಿತ ಸೆಪ್ಟೆಂಬರ್ 29,2017ರಂದು ಪುರಸಭೆ ನಿಗಮಕ್ಕೆ ಪತ್ರ ಬರೆದು ಈ ಬಗ್ಗೆ ಸೂಚನೆ ನೀಡಿದೆ. ಇದ್ರ ಅಡಿಯಲ್ಲಿ ಎಲ್ಲ ಜಾನುವಾರುಗಳಿಗೆ ಪರವಾನಿಗೆ ನೀಡಲಾಗುವುದು. ಅದನ್ನು ಪ್ರತಿವರ್ಷ ನವೀಕರಿಸಲಾಗುವುದು. ಈ ಯೋಜನೆಯಡಿ ನಾಯಿ, ಬೆಕ್ಕು, ಹಂದಿ, ಆಡು, ಕುದುರೆ, ಕುರಿ, ಜಿಂಕೆಗೆ ತೆರಿಗೆ ವಿಧಿಸಲಾಗುವುದು. ಈ ಎಲ್ಲ ಜಾನುವಾರುಗಳನ್ನು ಸಾಕುವ ಮಂದಿ ಪ್ರತಿ ವರ್ಷ 250 ರೂಪಾಯಿ ತೆರಿಗೆ ನೀಡಬೇಕಾಗುತ್ತದೆ.

ಇದ್ರ ಜೊತೆಗೆ ಎಮ್ಮೆ, ಎತ್ತು, ಒಂಟೆ, ಹಸು, ಆನೆ ಸಾಕುವ ಮಂದಿ ವರ್ಷಕ್ಕೆ 500 ರೂಪಾಯಿ ತೆರಿಗೆ ನೀಡಬೇಕಾಗುತ್ತದೆ. ಈ ಪ್ರಾಣಿಗಳಿಗೆ ಹಿಂಸೆ ನೀಡಿದಲ್ಲಿ ಮಾಲೀಕರ ಪರವಾನಿಗೆ ರದ್ದಾಗಲಿದೆ. ಹಾಗೆ ಮಾಲೀಕರು ಜಾನುವಾರು ಸಾಕುವ ಅವಕಾಶ ಕಳೆದುಕೊಳ್ಳಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...