alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿನ ಶೋಕದಲ್ಲಿದ್ದವರಿಗೆ ಆಸ್ಪತ್ರೆಯಿಂದ ಬಂತು ಗುಡ್ ನ್ಯೂಸ್

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ವಿಚಿತ್ರ ಘಟನೆ ನಡೆದಿದೆ. ಚಿಂದ್ವಾರಾ ಜಿಲ್ಲಾ ಆಸ್ಪತ್ರೆ ವೈದ್ಯರು ಚಿಕಿತ್ಸೆಗೆ ಬಂದಿದ್ದ ಹಿಮಾಂಶು ಸಾವನ್ನಪ್ಪಿದ್ದಾನೆಂದು ಘೋಷಣೆ ಮಾಡಿ ಶವಾಗಾರದಲ್ಲಿ ಶವವನ್ನು ಇಟ್ಟಿದ್ದರು. ಮಗನ ಸಾವಿನ ಸುದ್ದಿ ಕೇಳಿ ಇಡೀ ಕುಟುಂಬ ದುಃಖದಲ್ಲಿತ್ತು. ಆಗ ಅದೇ ಆಸ್ಪತ್ರೆಯಿಂದ ಬಂದ ಆಶ್ಚರ್ಯಕಾರಿ ಖುಷಿ ಸುದ್ದಿ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.

ಶವಾಗಾರದಲ್ಲಿದ್ದ ಹಿಮಾಂಶು ದೇಹದಲ್ಲಿ ಜೀವವಿದೆ ಎಂಬುದು ಸಿಬ್ಬಂದಿಯೊಬ್ಬನಿಗೆ ಗೊತ್ತಾಗಿದೆ. ತಕ್ಷಣ ಆತ ವೈದ್ಯರಿಗೆ ಮಾಹಿತಿ ನೀಡಿದ್ದಾರೆ. ವೈದ್ಯರು ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಿಂದ ಹಿಮಾಂಶುವನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗ್ತಿದೆ.

ಕಾರು ಅಪಘಾತದಲ್ಲಿ ಹಿಮಾಂಶು ಗಂಭೀರವಾಗಿ ಗಾಯಗೊಂಡಿದ್ದ. ಆಸ್ಪತ್ರೆಗೆ ಸಾಗಿಸುವ ಮುನ್ನವೇ ಉಸಿರು ನಿಂತಿತ್ತು. ಸ್ಥಳೀಯ ಆಸ್ಪತ್ರೆಯಲ್ಲಿ ಹಿಮಾಂಶು ಸಾವನ್ನಪ್ಪಿದ್ದಾನೆಂದು ತಿಳಿಸಿದ್ದರು. ನಂತ್ರ ಹಿಮಾಂಶುವನ್ನು ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಕೂಡ ಹಿಮಾಂಶು ಸಾವನ್ನಪ್ಪಿದ್ದಾನೆಂದು ವೈದ್ಯರು ತಿಳಿಸಿದ್ದರು. ಕೆಲವೊಮ್ಮೆ ಇಂಥ ಘಟನೆಗಳು ನಡೆಯುತ್ತವೆ ಎಂದು ವೈದ್ಯರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...