alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನಯಾನ ಸಂಸ್ಥೆಗಳಿಗೆ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

ಇತ್ತೀಚೆಗಷ್ಟೇ ಪೆಟ್ರೋಲ್ ಹಾಗೂ ಡಿಸೇಲ್ ಮೇಲಿನ ತೆರಿಗೆ ಕಡಿತಗೊಳಿಸಿದ್ದ ಕೇಂದ್ರ ಸರಕಾರ ಇದೀಗ ವಿಮಾನ ಇಂಧನ (ಏವಿಯೇಷನ್ ಟರ್ಬೈನ್ ಫ್ಯುಯಲ್) ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ.

ದಿನದಿಂದ ದಿನಕ್ಕೆ ಕಚ್ಚಾ ತೈಲ‌ ಬೆಲೆ ಏರಿಕೆಯಾಗುತ್ತಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ವಿಮಾನಯಾನ ಸಂಸ್ಥೆಗಳು, ವಿಮಾನ ಇಂಧನದ ಮೇಲಿನ ತೆರಿಗೆ ಕಡಿತಗೊಳಿಸಲು ಕೇಂದ್ರದ ಮೇಲೆ ಒತ್ತಡ ಹೇರಿದ್ದವು. ಆದ್ದರಿಂದ ಶೇ. 14 ರಿಂದ 11 ಕ್ಕೆ ಇಳಿಸುವ ನಿರ್ಧಾರಕ್ಕೆ ಕೇಂದ್ರ ಸರಕಾರ ಬಂದಿದೆ‌.

ಸದ್ಯ ಮುಂಬೈನಲ್ಲಿ ವಿಮಾನ‌ ತೈಲಬೆಲೆ ಪ್ರತಿ ಕಿಲೋ ಲೀಟರ್ ಗೆ 74,111 ರೂಪಾಯಿ ಇದೆ‌. ಪೆಟ್ರೋಲ್-ಡಿಸೇಲ್ ಗೆ ಹೋಲಿಸಿದರೆ ವಿಮಾನಕ್ಕೆ ಬಳಸುವ ತೈಲ‌ಬೆಲೆ ಕಡಿಮೆಯಿದೆ‌‌‌. 2017 ರ ಜುಲೈ ನಲ್ಲಿ ಕಿಲೋ ಲೀಟರ್ ಗೆ 47,013 ಇತ್ತು. ಕಳೆದ ತಿಂಗಳು ಸರಕಾರ ಎಟಿಎಫ್ ಮೇಲಿನ ತೆರಿಗೆಯನ್ನು ಏರಿಸಿದ್ದರಿಂದ ತೈಲ‌ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು.

ಆದರೆ ಮಧ್ಯಪ್ರದೇಶ ಹಾಗೂ ರಾಜಸ್ತಾನದಲ್ಲಿ ಚುನಾವಣೆ ಘೋಷಣೆಯಾಗಿದ್ದು,‌ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೇಂದ್ರ ಸರಕಾರ ಈ ತೆರಿಗೆ ಕಡಿತಗೊಳಿಸಲು‌ ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕೆನ್ನುವ ಮಾತುಗಳು‌ ಕೇಳಿಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...