alex Certify
ಕನ್ನಡ ದುನಿಯಾ       Mobile App
       

Kannada Duniya

ಬುಲೆಟ್‌ ಟ್ರೇನ್‌ ಕುರಿತು ಮುಖ್ಯ ಮಾಹಿತಿ ನೀಡಿದ ಕೇಂದ್ರ

ಮೆಟ್ರೋ ಸಿಟಿಗಳ ನಡುವೆ ಕ್ಷಿಪ್ರ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹೈಸ್ಪೀಡ್‌ ಬುಲೆಟ್‌ ರೈಲುಗಳ ಓಡಾಟ ಸಂಬಂಧ ಕಾರ್ಯಸಾಧ್ಯತಾ ವರದಿ ತಯಾರಿಗೆ 6 ಮಾರ್ಗಗಳನ್ನು ಆಯ್ಕೆ ಮಾಡಲಾಗಿದೆ.

ಲೋಕಸಭೆಯಲ್ಲಿ ಕೇಂದ್ರ ಸರಕಾರ ಈ ವಿಚಾರ ತಿಳಿಸಿದ್ದು, ದೆಹಲಿ, ಕೋಲ್ಕತ್ತ, ಮುಂಬೈ ಹಾಗೂ ಚೆನ್ನೈ ನಡುವೆ ವಜ್ರಾಕಾರದಲ್ಲಿ ಬುಲೆಟ್‌ ರೈಲು ಮಾರ್ಗಕ್ಕೆ ಉದ್ಧೇಶಿಸಲಾಗಿದೆ. ಈ ಸಂಬಂಧ 6 ಮಾರ್ಗಗಳನ್ನು ಗುರುತಿಸಲಾಗಿದ್ದು, ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದೆ.

ದೆಹಲಿ-ಮುಂಬೈ, ದೆಹಲಿ-ಕೋಲ್ಕತ್ತ(ಲಖನೌ ಮಾರ್ಗವಾಗಿ), ಮುಂಬೈ-ಚೆನ್ನೈ, ದೆಹಲಿ-ಚೆನ್ನೈ ಮಾರ್ಗದಲ್ಲಿನ ದೆಹಲಿ ನಾಗ್ಪುರ, ಮುಂಬೈ-ಕೋಲ್ಕತ್ತ ಮಾರ್ಗದಲ್ಲಿನ ಮುಂಬೈ-ನಾಗ್ಪುರ ಹಾಗೂ ಚೆನ್ನೈ-ಬೆಂಗಳೂರು -ಮೈಸೂರು ಮಾರ್ಗಗಳನ್ನು ಕಾರ್ಯಸಾಧ್ಯತಾ ವರದಿ ತಯಾರಿಗಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.

ಇದಕ್ಕಾಗಿ ಕೇಂದ್ರ ಸರಕಾರ ಫ್ರಾನ್ಸ್‌, ಸ್ಪೇನ್‌, ಜಪಾನ್‌ ಹಾಗ ಜರ್ಮನಿ ದೇಶದ ಸಹಕಾರ ಕೋರಲಿದೆ. ಮುಂಬೈ-ಅಹಮದಾಬಾದ್‌ ಮಾರ್ಗವನ್ನು ಹೊರತುಪಡಿಸಿ, 6 ಮಾರ್ಗಗಳಲ್ಲಿ ಕಾರ್ಯಸಾಧ್ಯತಾ ವರದಿ ತಯಾರಿಸಲಾಗುತ್ತದೆ. ಮೊಟ್ಟ ಮೊದಲ ಮುಂಬೈ-ಅಹಮದಾಬಾದ್‌ ಬುಲೆಟ್‌ ರೈಲು ಮಾರ್ಗ 2022 ರಲ್ಲಿ ಅಂತಿಮ ಹಂತ ತಲುಪಲಿದ್ದು, ಜಪಾನ್‌ ಸಹಕಾರ ನೀಡುತ್ತಿದೆ. ಬುಲೆಟ್‌ ರೈಲಿನ ಪ್ರಯಾಣ ಈಗಿರುವ 7 ಗಂಟೆಗಳ ಪ್ರಯಾಣದ ಅವಧಿಯನ್ನು 2 ಗಂಟೆಗೆ ಇಳಿಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...