alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚ್ಛೇದಿತ ಹೆಣ್ಣು ಮಕ್ಕಳಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ಮೋದಿ ಸರ್ಕಾರ ಸೋಮವಾರ ಮಹಿಳೆಯರಿಗೆ ನೆಮ್ಮದಿಯ ಸುದ್ದಿಯೊಂದನ್ನು ನೀಡಿದೆ. ಕೇಂದ್ರದ ಆದೇಶದ ಪ್ರಕಾರ, ಸರ್ಕಾರಿ ನೌಕರರ ವಿಚ್ಛೇದಿತ ಮಗಳಿಗೆ ಕುಟಂಬಸ್ಥರಿಗೆ ಸಿಗುವ ಪಿಂಚಣಿ ಲಾಭ ಸಿಗಲಿದೆ.

ತಂದೆ ಸಾವನ್ನಪ್ಪಿದ ನಂತ್ರ ಮಗಳು ವಿಚ್ಛೇದನ ಪಡೆದ್ರೂ ಆಕೆ ಪಿಂಚಣಿಯ ಲಾಭ ಪಡೆಯಲಿದ್ದಾಳೆ. ಈ ಹಿಂದೆ ತಂದೆ ಸಾವನ್ನಪ್ಪುವ ಮೊದಲು ವಿಚ್ಛೇದನ ಪಡೆದಿದ್ದ ಮಗಳಿಗೆ ಮಾತ್ರ ಪಿಂಚಣಿ ಲಾಭ ಸಿಗ್ತಾಯಿತ್ತು. ವಿಧವೆ ಮಗಳು ಕೂಡ ತಂದೆಗೆ ಸಿಗುವ ಪಿಂಚಣಿಯಲ್ಲಿ ಪಾಲು ಪಡೆಯಲು ಅರ್ಹಳಾಗಿದ್ದಾಳೆ.

ಬಾಡಿಗೆ ತಾಯಂದಿರಿಗೂ ಸರ್ಕಾರ ಖುಷಿ ಸುದ್ದಿ ನೀಡಿದೆ. ಬಾಡಿಗೆ ತಾಯಂದಿರು ಕೂಡ ಇನ್ಮುಂದೆ ಮಾತೃತ್ವ ರಜೆ ಪಡೆಯಬಹುದಾಗಿದೆ. ಅವರಿಗೆ 6 ತಿಂಗಳು ರಜೆ ಸಿಗಲಿದೆ. ಮಗುವಿಗೆ ಜನ್ಮ ನೀಡುತ್ತಿರುವ ಮಹಿಳೆ ಹಾಗೂ ಮಗುವಿನ ನಿಜವಾದ ತಾಯಿ ಇಬ್ಬರಿಗೂ ಕೆಲ ಸಂದರ್ಭಗಳಲ್ಲಿ ಒಟ್ಟಿಗೆ ರಜೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...