alex Certify
ಕನ್ನಡ ದುನಿಯಾ       Mobile App
       

Kannada Duniya

ಡೇವಿಡ್ ಗೆಟ್ಟಾಗೆ ಸಿಕ್ತು ರೆಡ್ ಕಾರ್ಪೆಟ್ ಸ್ವಾಗತ

hyde-gutta

ಹೈದರಾಬಾದ್:  ಫ್ರೆಂಚ್ ನ ಖ್ಯಾತ ಡಿ.ಜೆ. ಗಾಯಕ ಡೇವಿಡ್ ಗೆಟ್ಟಾ ಕಾರ್ಯಕ್ರಮಕ್ಕೆ, ಬೆಂಗಳೂರು ಹಾಗೂ ಮುಂಬೈನಲ್ಲಿ ಅವಕಾಶ ಸಿಗದಿರುವ ಬೆನ್ನಲ್ಲೇ, ಹೈದರಾಬಾದ್ ಪೊಲೀಸರು ರೆಡ್ ಕಾರ್ಪೆಟ್ ಸ್ವಾಗತ ನೀಡಿದ್ದಾರೆ.

ಸೈಬರಾಬಾದ್ ಪೊಲೀಸರು ಡೇವಿಡ್ ಗೆಟ್ಟಾ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುವುದು ಎಂದು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ತಿಳಿಸಿದ್ದು, ಅಗತ್ಯ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಿದ್ದ ಡೇವಿಡ್ ಗೆಟ್ಟಾ ಕಾರ್ಯಕ್ರಮಕ್ಕೆ ಎ.ಪಿ.ಎಂ.ಸಿ. ಚುನಾವಣೆ ಕಾರಣದಿಂದ ಪೊಲೀಸರು ಅವಕಾಶ ನೀಡಿರಲಿಲ್ಲ.

ಹಾಗಾಗಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಖ್ಯಾತ ಡಿ.ಜೆ. ಗಾಯಕ ಡೇವಿಡ್ ಗೆಟ್ಟಾ ಕಾರ್ಯಕ್ರಮ ರದ್ದಾಗಿತ್ತು.

ಮುಂಬೈನಲ್ಲಿ ಕಾರ್ಯಕ್ರಮದ ಆಯೋಜಕರು, ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಕಾರಣ, ಅವಕಾಶ ಸಿಕ್ಕಿರಲಿಲ್ಲ.

ಇದೀಗ ಹೈದರಾಬಾದ್ ನ ಸೈಬರಾಬಾದ್ ಪೊಲೀಸರು ಸ್ವಾಗತ ಕೋರಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಹೈದರಾಬಾದ್ ನಲ್ಲಿ ಗೆಟ್ಟಾ ಕಾರ್ಯಕ್ರಮ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...