alex Certify
ಕನ್ನಡ ದುನಿಯಾ       Mobile App
       

Kannada Duniya

ಗೋರಖ್ಪುರ ದುರಂತ: ಆರೋಗ್ಯ ಸಚಿವರ ವಿರುದ್ಧ ದೂರು ದಾಖಲು

gorakhpur-hospital-tragedy

ಗೋರಖ್ಪುರ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ಪ್ರಕರಣ 60ಕ್ಕೂ ಹೆಚ್ಚು ಕುಟುಂಬಗಳ ನೆಮ್ಮದಿಯನ್ನೇ ಕಿತ್ತುಕೊಂಡಿದೆ. ಬಾಬಾ ರಾಘವ್ ದಾಸ್ ಮೆಡಿಕಲ್ ಕಾಲೇಜಿನಲ್ಲಿ 63ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು, ಹೆತ್ತವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಈ ಮಧ್ಯೆ ಮಗು ಕಳೆದುಕೊಂಡ ರಾಜ್ಭರ್ ಎಂಬುವವರು ಉತ್ತರಪ್ರದೇಶದ ಆರೋಗ್ಯ ಸಚಿವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ವಿರುದ್ಧವೂ ದೂರು ನೀಡಿದ್ದಾರೆ.

g

ಬಿಹಾರದ ಗೋಪಾಲ್ಗಂಜ್ ಮೂಲದವರಾದ ರಾಜ್ಭರ್ ತಮ್ಮ ಮಗುವನ್ನು ಆಗಸ್ಟ್ 10ರಂದು ಗೋರಖ್ಪುರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಅವರ ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತ್ತು. ಆಕ್ಸಿಜನ್ ಪೂರೈಕೆಯಲ್ಲಾದ ಅಡಚಣೆಯಿಂದ್ಲೇ ತಮ್ಮ ಮಗು ಮೃತಪಟ್ಟಿದೆ ಅಂತಾ ರಾಜ್ಭರ್ ದೂರಿದ್ದಾರೆ.

ಆರೋಗ್ಯ ಸಚಿವ ಸಿದ್ದಾರ್ಥ ನಾಥ್ ಸಿಂಗ್, ವೈದ್ಯಕೀಯ ಶಿಕ್ಷಣ ಸಚಿವ ಆಶುತೋಷ್ ಟಂಡನ್ ಹಾಗೂ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ತ್ರಿವೇದಿ ಈ ಸಾವಿಗೆ ಹೊಣೆ ಅಂತಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ ಮಗುವಿನ ಮರಣೋತ್ತರ ಪರೀಕ್ಷೆಯನ್ನೂ ನಡೆಸಿಲ್ಲ ಅಂತಾ ಆರೋಪ ಮಾಡಿದ್ದಾರೆ.

ಆಗಸ್ಟ್ 14ರಂದೇ ರಾಜ್ಭರ್ ದೂರು ನೀಡಿದ್ದು, ಇದುವರೆಗೂ ಪೊಲೀಸರು ಎಫ್ ಐ ಆರ್ ದಾಖಲು ಮಾಡಿಲ್ಲ. ಈ ಮಧ್ಯೆ ಆಸ್ಪತ್ರೆಯಲ್ಲಿ ನಡೆದ ದುರಂತಕ್ಕೆ ಕಾಲೇಜು ಪ್ರಾಂಶುಪಾಲ ರಾಜೀವ್ ಮಿಶ್ರಾ ಅವರ ನಿರ್ಲಕ್ಷ್ಯವೇ ಕಾರಣ ಅಂತಾ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...