alex Certify
ಕನ್ನಡ ದುನಿಯಾ       Mobile App
       

Kannada Duniya

34 ಇಂಚಿನ ವರನಿಗೆ 33 ಇಂಚಿನ ವಧು

ಮಂಗಳವಾದ್ಯ ಮೊಳಗಿತ್ತು. ಎಲ್ಲರ ಮದುವೆಯಲ್ಲಿರುವಂತೆ ಸಂಭ್ರಮವಿತ್ತು. ಆದ್ರೆ ಗೋರಕ್ಪುರ ಜನರಿಗೆ ಇದು ಸಾಮಾನ್ಯ ಮದುವೆಯಾಗಿರಲಿಲ್ಲ. 34 ಇಂಚಿನ ವರ ಹಾಗೂ 33 ಇಂಚಿನ ವಧುವನ್ನು ನೋಡಲು ಸಂಬಂಧಿಕರಲ್ಲದವರೂ ಮದುವೆ ಮನೆಗೆ ಬಂದಿದ್ರು.

ವಧು ಸಾರಿಕಾಗೆ 36 ವರ್ಷ. ವರ ಸುರೇಶ್ ಗೆ 42 ವರ್ಷ. ಎರಡೂ ಕುಟುಂಬಗಳ ಸದಸ್ಯರು ಮಕ್ಕಳನ್ನು ತುಂಬಾ ಪ್ರೀತಿಯಿಂದ ಬೆಳೆಸಿದ್ರು. ಮಕ್ಕಳಿಗೆ ಬೇಧ ಮಾಡಿರಲಿಲ್ಲ. 33 ಇಂಚಿನ ಸಾರಿಕೆ ಬಿಎ ಪಾಸ್ ಮಾಡಿದ್ದರೆ ಸುರೇಶ್ ಸಂಸ್ಕೃತದಲ್ಲಿ ಪಿಹೆಚ್ಡಿ ಮಾಡಿದ್ದಾನೆ. ಸುರೇಶ್ ನನಗೆ ಮದುವೆ ಭಾಗ್ಯವಿಲ್ಲ ಎಂದುಕೊಂಡಿದ್ದನಂತೆ. ಆದ್ರೆ ಸಾರಿಕಾ ರಾಜಕುಮಾರನಿಗಾಗಿ ಕಾಯ್ತಿದ್ದಳಂತೆ.

ಮದುವೆ ಇಬ್ಬರ ಮುಖದಲ್ಲಿ ಖುಷಿ ಮೂಡಿಸಿದೆ. ಕುಟುಂಬಸ್ಥರು ಕೂಡ ಸಂತೋಷ ಹಂಚಿಕೊಂಡಿದ್ದಾರೆ. ಈ ವಿಶೇಷ ಮದುವೆಗೆ ಬಂದವರೆಲ್ಲ ವಧು-ವರನ ಜೊತೆ ನಿಂತು ಸೆಲ್ಫಿ ತೆಗೆಸಿಕೊಳ್ಳುವುದ್ರಲ್ಲಿ  ಬ್ಯುಸಿಯಾಗಿದ್ದರು. ಗೋರಕ್ಪುರದಲ್ಲಿ ನಡೆದ ಮದುವೆ ಎಲ್ಲರ ಕೇಂದ್ರಬಿಂದುವಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...