alex Certify
ಕನ್ನಡ ದುನಿಯಾ       Mobile App
       

Kannada Duniya

ಮೋಸ ಮಾಡಿದ ಪ್ರೇಮಿಗೆ ಬಿತ್ತು ಚಪ್ಪಲಿ ಏಟು

ಸುಳ್ಳು ಪರಿಚಯ ಹೇಳಿ ಪ್ರೀತಿ ನಾಟಕವಾಡಿದ್ದ ಯುವಕನಿಗೆ ಅಪ್ರಾಪ್ತೆ ಚಪ್ಪಲಿ ಏಟು ನೀಡಿದ್ದಾಳೆ. ಪ್ರೇಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಘಟನೆ ಗೋರಕ್ಪುರದ ಗುಲರಿಹಾ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಚೆನ್ನೈನಲ್ಲಿ ಕೆಲಸ ಮಾಡುವ ಅಮಿನ್ ಉಲ್ ಹಕ್, ಸೋನು ವಿಶ್ವಕರ್ಮ್ ಹೆಸರಿನಲ್ಲಿ ಹುಡುಗಿ ಜೊತೆ ಮಾತನಾಡ್ತಿದ್ದ. ಮೊಬೈಲ್ ಮಾತುಕತೆಯಲ್ಲೇ ಇಬ್ಬರ ಮಧ್ಯೆ ಪ್ರೇಮ ಚಿಗುರಿದೆ. ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಅಮಿನ್, ಹುಡುಗಿಯನ್ನು ಚೆನ್ನೈಗೆ ಕರೆದೊಯ್ಯಲು ನಿರ್ಧರಿಸಿದ್ದಾನೆ.

ಹುಡುಗಿ ಇದಕ್ಕೆ ಒಪ್ಪಿದ್ದಲ್ಲದೆ ಅಮಿನ್ ಜೊತೆ ಚೆನ್ನೈ ಕಡೆ ಹೊರಟಿದ್ದಳು. ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಆಗ ಅಮಿನ್ ಬಣ್ಣ ಬಯಲಾಗಿದೆ. ವಿಚಾರಣೆ ವೇಳೆ ಸೋನು ಅಲಿಯಾಸ್ ಅಮಿನ್ ತನ್ನ ನಿಜ ಹೆಸರನ್ನು ಹೇಳಿದ್ದಾನೆ. ಇದ್ರಿಂದ ಕಂಗಾಲಾದ ಅಪ್ರಾಪ್ತೆ ಅಮಿನ್ ಗೆ ಚಪ್ಪಲಿ ಏಟು ನೀಡಿದ್ದಾಳೆ. ತಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಹುಡುಗಿ ಪ್ರೇಮಿ ವಿರುದ್ಧ ದೂರು ನೀಡಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...