alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣ- ಆಂಧ್ರ ಕಚ್ಚಾಟಕ್ಕೆ ತಕ್ಕ ಉತ್ತರ ನೀಡಿದ ಗೋಪಿಚಂದ್

images

ರಿಯೊ ಒಲಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದು ಬಂದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧುಗಾಗಿ ಆಂಧ್ರಪ್ರದೇಶ ಹಾಗೂ ತೆಲಂಗಾಣದ ನಡುವೆ ಶೀತಲ ಸಮರ ಶುರುವಾದಂತಿದೆ. ಸಿಂಧು ನಮ್ಮ ಮನೆ ಮಗಳು ಅಂತಾ ಆಂಧ್ರ ಹೇಳಿದ್ರೆ ಸಿಂಧು ನಮ್ಮವಳು ಎನ್ನುತ್ತಿದೆ ತೆಲಂಗಾಣ. ಇಬ್ಬರ ಕಿತ್ತಾಟಕ್ಕೆ ಸಿಂಧು ಕೋಚ್ ಗೋಪಿಚಂದ್ ತಕ್ಕ ಉತ್ತರ ನೀಡುವ ಜೊತೆಗೆ ವಿವಾದವನ್ನು ಚಿವುಟಿ ಹಾಕುವ ಪ್ರಯತ್ನ ಮಾಡಿದ್ದಾರೆ.

ಎರಡೂ ರಾಜ್ಯಗಳ ನಡುವೆ ನಡೆಯುತ್ತಿರುವ ವಾಗ್ಯುದ್ಧದ ಬಗ್ಗೆ ಪಿವಿ ಸಿಂಧು ಮುಂದೆ ಪತ್ರಕರ್ತರೊಬ್ಬರು ಪ್ರಶ್ನೆಯಿಟ್ಟಿದ್ದಾರೆ. ಈ ವೇಳೆ ಮಧ್ಯ ಪ್ರವೇಶ ಮಾಡಿದ ಕೋಚ್ ಗೋಪಿಚಂದ್, ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಸಿಂಧು ಭಾರತದ ಮಗಳು. ಆಕೆ ಭಾರತೀಯಳು. ಎಲ್ಲ ರಾಜ್ಯಗಳೂ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ನಮಗೆ ಖುಷಿಯ ವಿಚಾರ ಎಂದಿದ್ದಾರೆ.

ನಿನ್ನೆ ಸಂಜೆ ತೆಲಂಗಾಣದ ಗಚ್ಚಿಬೌಲಿ ಸ್ಟೇಡಿಯಂನಲ್ಲಿ ಪಿವಿ ಸಿಂಧು ಹಾಗೂ ಗೋಪಿಚಂದ್ ಗೆ ಸನ್ಮಾನ ಮಾಡಲಾಯ್ತು. ಸಮಾರಂಭದಲ್ಲಿ ತೆಲಂಗಾಣ ಉಪ ಮುಖ್ಯಮಂತ್ರಿ ಮಹಮೂದ್ ಅಲಿ ಸಿಂಧು ತೆಲಂಗಾಣದ ಹೆಮ್ಮೆ ಎಂದ್ರು. ಗೃಹ ಸಚಿವರು ಸಿಂಧು ತೆಲಂಗಾಣದ ಮಗಳು ಎಂದ್ರು.

ಆಂಧ್ರಪ್ರದೇಶ ಸರ್ಕಾರ ಕೂಡ ಸಿಂಧು ಹಾಗೂ ಗೋಪಿಚಂದ್ ಸನ್ಮಾನಕ್ಕೆ ತಯಾರಿ ನಡೆಸುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸಿಂಧು ಅವರಿಗೆ 5 ಕೋಟಿ ರೂ.ಚೆಕ್ , ಒಂದು ಪ್ಲಾಟ್ ಹಾಗೂ ಸರ್ಕಾರಿ ನೌಕರಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇತ್ತ ಆಂಧ್ರ ಸರ್ಕಾರ ಕೂಡ 3 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...