alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಸ್ವಾತಂತ್ರ್ಯ ಸಂಭ್ರಮಕ್ಕೆ ಡೂಡಲ್ ಗೌರವ

72ನೇ ಸ್ವಾತಂತ್ರ್ಯ ಸಂಭ್ರಮದ ಆಚರಣೆ ದೇಶದೆಲ್ಲೆಡೆ ಕಳೆಕಟ್ಟಿದೆ. ಭಾರತದ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಗೂಗಲ್ ಡೂಡಲ್ ಆರ್ಟ್ ಈ ಬಾರಿ ಇಮ್ಮಡಿಗೊಳಿಸಿದೆ. ಟ್ರಕ್ ಆರ್ಟ್ ಮೂಲಕ ಗೂಗಲ್ ಡೂಡಲ್ ರಚಿಸಿ ಭಾರತೀಯರ ಸಂತಸಕ್ಕೆ ಕಾರಣವಾಗಿದೆ.

ಟ್ರಕ್ ಆರ್ಟ್ ಮೂಲಕ ಈ ಬಾರಿಯ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಟ್ರಕ್ ಚಾಲಕರಿಗೆ ಗೂಗಲ್ ಅರ್ಪಣೆ ಮಾಡುತ್ತಿದೆ. ಟ್ರಕ್ ಗಳ ಮೇಲ್ಭಾಗದಲ್ಲಿ ಕಾಣಸಿಗುವಂತಾ ಡ್ರಾಯಿಂಗ್ ಬೋರ್ಡ್ ಮಾದರಿಯಲ್ಲಿ ಗೂಗಲ್ ಡೂಡಲ್ ನ್ನ ರಚಿಸಿದೆ. ದೇಶದ ನಾಲ್ಕು ಲಕ್ಷ ಚದರ ಕಿಲೋಮೀಟರ್ ಚಲಿಸುತ್ತಾ ರಸ್ತೆ ಬದಿಗಳಲ್ಲೇ ಬದುಕು ಸಾಗಿಸುವ ಟ್ರಕ್ ಚಾಲಕರಿಗೆ ಈ ಮೂಲಕ ಗೂಗಲ್ ಡೂಡಲ್ ಗೌರವ ಸಲ್ಲಿಸಿದೆ.

ಭಾರತದ ರಾಷ್ಟ್ರೀಯ ಸಂಕೇತಗಳನ್ನ ಈ ಟ್ರಕ್ ಆರ್ಟ್ ನಲ್ಲಿ ಬಳಸಿಕೊಳ್ಳಲಾಗಿದೆ. ಒಂದು ಕಡೆ ಆನೆ ಮತ್ತೊಂದು ಕಡೆ ರಾಷ್ಟ್ರೀಯ ಪ್ರಾಣಿ ಹುಲಿ ಎರಡರ ಮಧ್ಯದಲ್ಲಿ ರಾಷ್ಟ್ರಧ್ವಜವಿದೆ. ರಾಷ್ಟ್ರೀಯ ಪಕ್ಷಿ ನವಿಲು, ಕಮಲದ ಹೂವು , ಮಾವಿನ ಕಾಯಿಯ ಚಿತ್ರಗಳನ್ನ ಟ್ರಕ್ ಆರ್ಟ್ ನಲ್ಲಿ ಬಳಸಿಕೊಳ್ಳಲಾಗಿದೆ. ವಸಂತ ಋತುವಿನ ಆಗಮನದ ಥೀಮ್ ಗೂಗಲ್ ಡೂಡಲ್ ನಲ್ಲಿ ಎದ್ದು ಕಾಣ್ತಿರೋದನ್ನ ಗಮನಿಸಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...