alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮನ ವಯಸ್ಸಿನ ಮಹಿಳೆ ಮೇಲೆ ಕೈಹಾಕಿದ್ನಾ ಟೆಕ್ಕಿ…?

ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದರಲ್ಲಿ ಅಮೆರಿಕದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಈತ ಎನ್ ಆರ್ ಐ ಆಗಿದ್ದು, ಗೂಗಲ್ ಕಂಪನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡ್ತಾನೆ.

22 ವರ್ಷದ ಅನ್ಮೋಲ್ ಸಿಂಗ್ ಖರ್ಬಂದ ಬಂಧಿತ ಆರೋಪಿ. ಜನವರಿ 6ರಂದು ಅಮೆರಿಕ ಮೂಲದ 52 ವರ್ಷದ ಮಹಿಳೆ ಹೋಟೆಲ್ ಗೆ ಬಂದಿದ್ಲು. ಅನ್ಮೋಲ್ ಅವಳ ಜೊತೆಗೆ ಸ್ನೇಹ ಬೆಳೆಸಿದ್ದ. ಜನವರಿ 10ರಂದು ತಾಜ್ ಪ್ಯಾಲೆಸ್ ಹೋಟೆಲ್ ಬಾರ್ ನಲ್ಲಿ ಇಬ್ಬರೂ ಮದ್ಯ ಸೇವಿಸಿದ್ದಾರೆ.

ನಂತರ ಅವಳನ್ನು ಅನ್ಮೋಲ್ ತನ್ನ ಕೋಣೆಗೆ ಕರೆದೊಯ್ದಿದ್ದಾನಂತೆ. ಅಲ್ಲಿ ಮಹಿಳೆಗೆ ಸಿಗರೇಟ್ ಕೊಟ್ಟಿದ್ದಾನೆ. ನಂತರ ಅವಳನ್ನು ಬಲವಂತವಾಗಿ ತಬ್ಬಿಕೊಂಡಿದ್ದಲ್ಲದೆ ಅಸಭ್ಯವಾಗಿ ಸ್ಪರ್ಷಿಸಿದ್ದಾನೆ ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಆಕೆ ಹೋಟೆಲ್ ನಿಂದ ಚೆಕೌಟ್ ಮಾಡಿಕೊಂಡು ಗುರ್ಗಾಂವ್ ಗೆ ತೆರಳಿದ್ಲು. ಮರುದಿನ ಅನ್ಮೋಲ್ ಜೊತೆಗೆ ಜಗಳವೂ ಆಗಿತ್ತು. ಆಕೆ ಜೈಪುರಕ್ಕೆ ಹೊರಟು ಹೋಗಿದ್ಲು. ನಿನ್ನೆ ಮತ್ತೆ ದೆಹಲಿಗೆ ಮರಳಿರೋ ವಿದೇಶಿ ಮಹಿಳೆ, ಪೊಲೀಸರಿಗೆ ದೂರು ನೀಡಿದ್ದಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...