alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ ! ಗೂಗಲ್ ನಲ್ಲಿ ರೆಕಾರ್ಡ್ ಆಗುತ್ತೆ ನಿಮ್ಮ ಮಾತು

googleತಂತ್ರಜ್ಞಾನದಿಂದ ನಮಗೆ ಎಷ್ಟು ಲಾಭವಿದ್ಯೋ ಅಷ್ಟೇ ಅಪಾಯ ಕೂಡ ಇದೆ. ಟೆಕ್ನಾಲಜಿ ನಮ್ಮ ಪ್ರೈವೆಸಿಗೆ ಭಂಗ ತರುತ್ತಿದೆ ಅನ್ನೋದಂತೂ ಸತ್ಯ.

ಗೂಗಲ್ ಇದ್ರೆ ಜಗತ್ತೇ ನಮ್ಮ ಕೈಯ್ಯಲ್ಲಿದ್ದಂತೆ. ಆದ್ರೆ ಗೂಗಲ್ ನ ಫ್ರೀ ಥಾಟ್ ಪ್ರಾಜೆಕ್ಟ್ ಮಾತ್ರ ಹ್ಯಾಕರ್ ಗಳು ಹಾಗೂ ಪತ್ತೇದಾರರಿಗೆ ವರದಾನವಿದ್ದಂತೆ. ಯಾಕಂದ್ರೆ ಅದರಲ್ಲಿ ನಮಗೆ ಅರಿವಿಲ್ಲದೆಯೇ ನಮ್ಮ ಮಾತುಗಳೆಲ್ಲ ರೆಕಾರ್ಡ್ ಆಗಿರುತ್ತವೆ.

ಪ್ರತಿ ಸೆಕೆಂಡ್ ಗೆ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ 40,000. ಅಂದ್ರೆ ಪ್ರತಿ ದಿನ ಗೂಗಲ್ ಸರ್ಚ್ ಮಾಡುವವರ ಸಂಖ್ಯೆ ಅಂದಾಜು 3.5 ಬಿಲಿಯನ್, ವರ್ಷಕ್ಕೆ 1.2 ಟ್ರಿಲಿಯನ್. ಈ ಸರ್ಚ್ ಗಳಿಂದ ಸಿಕ್ಕ ಫಲಿತಾಂಶಗಳನ್ನೆಲ್ಲ ಜಾಹೀರಾತು ಸೆಳೆಯಲು ಮತ್ತು ಇನ್ನಷ್ಟು ಬಳಕೆದಾರ ಸ್ನೇಹಿಯಾಗಿಸಲು ಉಪಯೋಗಿಸಲಾಗುತ್ತದೆ.

ನೀವು ವೆಬ್ ಸರ್ಚ್ ಗೆ ಗೂಗಲ್ ಬಳಸುತ್ತಿದ್ದೀರಾ ಅಂತಾದ್ರೆ, ಗೂಗಲ್ ನಿಮ್ಮ ಮೇಲೆ ನಿಗಾ ಇಟ್ಟಿದೆ ಅಂತಲೇ ಅರ್ಥ. ನೀವೇನು ನೋಡಿದ್ದೀರಾ, ಏನು ಮಾಡಿದ್ದೀರಾ ಹೀಗೆ ಪ್ರತಿಯೊಂದು ವಿವರವೂ ಗೂಗಲ್ ಬಳಿ ಇರುತ್ತದೆ. ಆದ್ರೆ ಬಳಕೆದಾರರ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಅವರ ವಿರುದ್ಧ ಬಳಸುವುದಿಲ್ಲ ಅನ್ನೋದು ಗೂಗಲ್ ಸಮರ್ಥನೆ. ಗೂಗಲ್ ರೆಕಾರ್ಡಿಂಗ್ ಅನ್ನು ನೀವು ನಿಲ್ಲಿಸಬಹುದು.

  1. history.google.com ಗೆ ಲಾಗಿನ್ ಆಗಿ.
  2. ಮೇಲ್ಭಾಗದಲ್ಲಿ ಬಲಗಡೆ ಕಾಣುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ. ಆ್ಯಕ್ಟಿವಿಟಿ ಕಂಟ್ರೋಲ್ ಮೇಲೆ ಕ್ಲಿಕ್ ಮಾಡಿ.
  3. ವಾಯ್ಸ್& ಆಡಿಯೋ ಆ್ಯಕ್ಟಿವಿಟಿಗೆ ಸ್ಕ್ರೋಲ್ ಡೌನ್ ಮಾಡಿ. ಮ್ಯಾನೇಜ್ ಆ್ಯಕ್ಟಿವಿಟಿ ಮೇಲೆ ಕ್ಲಿಕ್ ಮಾಡಿ.
  4. ಗೂಗಲ್ ರೆಕಾರ್ಡ್ ಮಾಡಿರುವ ಧ್ವನಿಯ ವಿವರ ನಿಮಗೆ ಇಲ್ಲಿ ಸಿಗುತ್ತದೆ.
  5. ಬಲಭಾಗದ ಮೂಲೆಯಲ್ಲಿರುವ ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ ಪ್ರತಿಯೊಂದು ರೆಕಾರ್ಡಿಂಗನ್ನೂ ನೀವು ಡಿಲಿಟ್ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...