alex Certify
ಕನ್ನಡ ದುನಿಯಾ       Mobile App
       

Kannada Duniya

ಉಸ್ತಾದ್ ಬಿಸ್ಮಿಲ್ಲಾ ಖಾನ್ ಗೆ ಡೂಡಲ್ ಗೌರವ

ಶೆಹನಾಯ್ ಮಾಂತ್ರಿಕ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಡೂಡಲ್ ಮೂಲಕ ಗೂಗಲ್ ಗೌರವ ಸಲ್ಲಿಸಿದೆ. ಮಹಾನ್ ವ್ಯಕ್ತಿಗಳ ವಿಶೇಷ ದಿನ ಮತ್ತು ವಿಶೇಷ ಸಂದರ್ಭಗಳಲ್ಲಿ ಗೂಗಲ್, ಡೂಡಲ್ ಮೂಲಕ ಗೌರವ ನಮನ ಸಲ್ಲಿಸುತ್ತದೆ.

ಅದೇ ರೀತಿ ಬಿಸ್ಮಿಲ್ಲಾ ಖಾನ್ ಅವರ 102 ಜನ್ಮ ದಿನೋತ್ಸವದ ಅಂಗವಾಗಿ ಡೂಡಲ್ ಗೌರವ ಸಲ್ಲಿಸಿದೆ. 1916 ರ ಮಾರ್ಚ್ 21 ರಂದು ಜನಿಸಿದ ಬಿಸ್ಮಿಲ್ಲಾ ಖಾನ್ ಭಾರತದಲ್ಲಿ ಶಹನಾಯ್ ಅನ್ನು ಜನಪ್ರಿಯಗೊಳಿಸಿದವರು. ಪದ್ಮಭೂಷಣ, ಭಾರತ ರತ್ನ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಅವರು ಭಾಜನರಾಗಿದ್ದಾರೆ.

2006 ರ ಆಗಸ್ಟ್ ನಲ್ಲಿ ಅವರು ವಾರಣಾಸಿಯಲ್ಲಿ ನಿಧನರಾಗಿದ್ದರು. ಅವರ ಗೌರವಾರ್ಥ ಗೂಗಲ್ ಡೂಡಲ್ ನೊಂದಿಗೆ ಗೌರವ ನಮನ ಸಲ್ಲಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...