alex Certify
ಕನ್ನಡ ದುನಿಯಾ       Mobile App
       

Kannada Duniya

ಬೋಗಿಯೇ ಇಲ್ಲದೆ 2 ಕಿಮೀ ಓಡಿದೆ ಗೂಡ್ಸ್ ರೈಲು

ವಾರದ ಹಿಂದಷ್ಟೆ ಎಕ್ಸ್ ಪ್ರೆಸ್ ರೈಲೊಂದು ಹಿಮ್ಮುಖವಾಗಿ ಚಲಿಸಿತ್ತು. ಇದೀಗ ಓಡಿಶಾದ ಬಾಲಾಸೋರ್ ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಬೋಗಿಗಳೇ ಇಲ್ಲದೆ 2 ಕಿಮೀ ದೂರಕ್ಕೆ ಚಲಿಸಿದೆ.

ಶನಿವಾರ ರಾತ್ರಿ ರೈಲು ಪನ್ಪನಾ ನಿಲ್ದಾಣದಿಂದ ಹೊರಟಿತ್ತು. 5 ಬೋಗಿಗಳನ್ನುಳ್ಳ ಗೂಡ್ಸ್ ರೈಲು ಅದು. ಧರ್ಮಾದಿಂದ ಟಾಟಾ ಕಡೆಗೆ ಪ್ರಯಾಣ ಬೆಳೆಸಿತ್ತು.

ಆದ್ರೆ ಸ್ವಲ್ಪ ದೂರಕ್ಕೆ ಬರುವಷ್ಟರಲ್ಲಿ ರೈಲಿನ ಬೋಗಿಗಳು ಎಂಜಿನ್ ನಿಂದ ಕಳಚಿ ಹೋಗಿವೆ. ಇದು ಲೋಕೋ ಪೈಲಟ್ ಗಮನಕ್ಕೇ ಬಂದಿಲ್ಲ. ರೈಲು ಸುಮಾರು 2 ಕಿಮೀ ದೂರ ಬೋಗಿಗಳೇ ಇಲ್ಲದೆ ಸಂಚರಿಸಿದೆ.

ಖಂಟಪಾಡಾ ನಿಲ್ದಾಣಕ್ಕೆ ಬರುತ್ತಿದ್ದಂತೆ ಚಾಲಕ, ಬೋಗಿಗಳು ಕಳಚಿ ಹೋಗಿರುವುದನ್ನು ಗಮನಿಸಿದ್ದಾನೆ. ಅದೃಷ್ಟವಶಾತ್ ಆ ಸಮಯದಲ್ಲಿ ಅದೇ ಮಾರ್ಗದಲ್ಲಿ ಯಾವುದೇ ರೈಲುಗಳು ಸಂಚರಿಸಿರಲಿಲ್ಲ. ಹಾಗಾಗಿ ದುರ್ಘಟನೆ ತಪ್ಪಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...