alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಪೊಲೀಸ್ ಹಾಗೂ ರಿಕ್ಷಾ ಚಾಲಕನಿಗೊಂದು ಸಲಾಂ

kid cryಆಗಾಗ ವರದಿಯಾಗುವ ಇಂತಹ ಪ್ರಕರಣಗಳು ಮಾನವೀಯತೆ ಇನ್ನೂ ಇದೆಯೆಂಬುದನ್ನು ಸಾರಿ ಹೇಳುತ್ತವೆ. ತನ್ನ ಪೋಷಕರಿಂದ ತಪ್ಪಿಸಿಕೊಂಡು ಆಕ್ರಂದನ ಮಾಡುತ್ತಿದ್ದ ಪುಟ್ಟ ಬಾಲಕನನ್ನು ಮತ್ತೆ ಪೋಷಕರ ಮಡಿಲು ಸೇರಿಸಲು ಈ ಪೊಲೀಸ್ ಪೇದೆ ಮತ್ತು ರಿಕ್ಷಾ ಚಾಲಕ ಮಾಡಿರುವ ಪ್ರಯತ್ನ ಅಷ್ಟಿಷ್ಟಲ್ಲ.

ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಪೇದೆ ಧರ್ಮೇಂದರ್ ಎಂಬವರಿಗೆ ಈ ಪುಟ್ಟ ಬಾಲಕ ಸಿಕ್ಕಿದ್ದಾನೆ. ತನ್ನ ಪೋಷಕರು ಕಾಣದಿದ್ದ ಕಾರಣ ಗಾಬರಿಗೊಂಡ ಬಾಲಕನ ರೋದನ ಮುಗಿಲು ಮುಟ್ಟಿದೆ. ಆತನ ಅಳು ನೋಡಿ ಧರ್ಮೇಂದರ್ ಅವರಿಗೆ ಸಂಕಟವಾಗಿದೆ.

ಬಾಲಕ ಹೇಳಿದ ಅಲ್ಪಸ್ವಲ್ಪ ಮಾಹಿತಿಯಿಂದ ಆತ ಕಲ್ಕಾಜಿ ಡಿಡಿ ಫ್ಲಾಟ್ಸ್ ನಲ್ಲಿ ವಾಸಿಸುತ್ತಿದ್ದನೆಂಬ ವಿಷಯ ತಿಳಿದುಬಂದಿದೆ. ಪೇದೆ ಧರ್ಮೇಂದರ್ ಬಾಲಕನನ್ನು ಆಟೋವೊಂದರಲ್ಲಿ ಕರೆದುಕೊಂಡು ಅಲ್ಲಿಗೆ ಹೋಗಿದ್ದು, ಸಿಕ್ಕ ಸಿಕ್ಕವರನ್ನೆಲ್ಲಾ ವಿಚಾರಿಸುತ್ತಾ ಅಕ್ಷರಶಃ ಬೀದಿ ಬೀದಿ ಸುತ್ತಿದ್ದಾರೆ. ಅಂತಿಮವಾಗಿ ಬಾಲಕನನ್ನು ಆತನ ಪೋಷಕರ ವಶಕ್ಕೆ ಒಪ್ಪಿಸುವ ಮೂಲಕ ಸಾರ್ಥಕತೆ ಮೆರೆದಿದ್ದಾರೆ. ಇವರ ಶ್ರಮವನ್ನು ನೋಡಿದ ಮಾಲ್ವಿಂದರ್ ರಿಕ್ಕಿ ಎಂಬವರು ಫೋಟೋ ತೆಗೆದು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದು, ಸಾವಿರಾರು ಮಂದಿ ಲೈಕ್ ಮಾಡಿ ಶೇರ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...