alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಟಿಕೇಟ್ ದರದಲ್ಲೇ ವಿಮಾನ ಪ್ರಯಾಣ ಸೌಲಭ್ಯ !

air inda tarinರೈಲು ಟಿಕೇಟ್ ಬುಕ್ ಮಾಡಿಸಿ ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ಇಲ್ಲಿದೆ. ಕಡೇ ಗಳಿಗೆಯಲ್ಲೂ ನಿಮ್ಮ ಟಿಕೇಟ್ ಕನ್ಪರ್ಮ್ ಆಗದಿದ್ದರೆ ರೈಲು ಟಿಕೇಟ್ ಮಾಡಿಸಿದ ದರದಲ್ಲೇ ವಿಮಾನ ಪ್ರಯಾಣ ಸೌಲಭ್ಯ ಸಿಗಲಿದೆ.

ಹೌದು, ಏರ್ ಇಂಡಿಯಾ ಹಾಗೂ ಐ.ಆರ್.ಸಿ.ಟಿ.ಸಿ ಈ ಕುರಿತು ಒಡಂಬಡಿಕೆ ಮಾಡಿಕೊಳ್ಳಲಿದ್ದು, ರೈಲಿನಲ್ಲಿ ಪ್ರಥಮ ದರ್ಜೆ ಟಿಕೇಟ್ ಕಾಯ್ದಿರಿಸಿದವರ ಟಿಕೇಟ್ ಕನ್ಪರ್ಮ್ ಆಗದಿದ್ದ ಪಕ್ಷದಲ್ಲಿ ಅಂತವರಿಗೆ ಮುಂದಿನ 24 ಗಂಟೆಯೊಳಗೆ ಏರ್ ಇಂಡಿಯಾ ವಿಮಾನದಲ್ಲಿ ಅದೇ ದರದಲ್ಲಿ ಪ್ರಯಾಣಿಸುವ ಅವಕಾಶ ಲಭ್ಯವಾಗಲಿದೆ.

ಎಸಿ 2 ಟೈಯರ್ ಟಿಕೇಟ್ ಕಾಯ್ದಿರಿಸಿದವರು 1,500 ರೂ. ನಿಂದ 2,000 ರೂ. ಗಳವರೆಗೆ ಹೆಚ್ಚುವರಿ ಪಾವತಿಸಬೇಕಾಗುತ್ತದೆ ಎನ್ನಲಾಗಿದ್ದು, ಏರ್ ಇಂಡಿಯಾ ವಿಮಾನ ಸೌಲಭ್ಯವಿರುವ ನಗರಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ ಎಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...