alex Certify
ಕನ್ನಡ ದುನಿಯಾ       Mobile App
       

Kannada Duniya

ನೌಕರರಿಗೆ ಖುಷಿ ಸುದ್ದಿ ನೀಡಲಿದೆ ಮೋದಿ ಸರ್ಕಾರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೌಕರರು ಹಾಗೂ ಕಾರ್ಮಿಕರನ್ನು ಸಂತೃಪ್ತಿಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿರುವ ಕೇಂದ್ರ ಸರ್ಕಾರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಖುಷಿ ಸುದ್ದಿ ನೀಡುವ ತಯಾರಿಯಲ್ಲಿದೆ.

ನೌಕರರು ಹಾಗೂ ಕಾರ್ಮಿಕರಿಗೆ ನೆರವಾಗುವಂತಹ ಮೂರು ಮುಖ್ಯ ಕಾನೂನನ್ನು ಜಾರಿಗೆ ತರಲು ತಯಾರಿ ನಡೆಯುತ್ತಿದೆ. ಈ ಹೊಸ ಕಾನೂನಿನಿಂದ ನೌಕರರ ಭದ್ರತೆ ಹಾಗೂ ಕನಿಷ್ಠ ಸಂಬಳ ಸೇರಿದಂತೆ ಅನೇಕ ಪ್ರಯೋಜನಗಳನ್ನು ನೌಕರರು ಪಡೆಯಲಿದ್ದಾರೆ.

ಸರ್ಕಾರ ಮೂರು ಮಸೂದೆ ಮೇಲೆ ಗಮನ ಹರಿಸಿದೆ. ನೌಕರರು ಹಾಗೂ ಕಾರ್ಮಿಕರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಸಚಿವ ಸಂತೋಷ್ ಕುಮಾರ್ ಗಾಂವಕರ್ ಹೇಳಿದ್ದಾರೆ. ಹೊಸ ಪ್ರಸ್ತಾವನೆ ಬಗ್ಗೆ ತಜ್ಞರು ಹಾಗೂ ಉದ್ಯಮದಿಂದ ಸಲಹೆ ಪಡೆಯಲಾಗುತ್ತಿದೆ ಎಂದು ಸಂತೋಷ್ ಹೇಳಿದ್ದಾರೆ. ಈ ಬದಲಾವಣೆಯಿಂದ ಹಣಕಾಸಿನ ಭದ್ರತೆ ಜೊತೆಗೆ ಉದ್ಯೋಗ ವಲಯದಲ್ಲಿ ಬಲ ಸಿಗಲಿದೆ ಎಂದು ಸಂತೋಷ್ ಹೇಳಿದ್ದಾರೆ. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ವರ್ಕಿಂಗ್ ಕಂಡೀಷನ್ ಕೋಡ್ ಮೇಲೆ ಕೇಂದ್ರ ಸರ್ಕಾರ ಕೆಲಸ ಮಾಡ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...