alex Certify
ಕನ್ನಡ ದುನಿಯಾ       Mobile App
       

Kannada Duniya

”ಪಾಕ್, ಚೀನಾದ ಸುಂದರ ಹುಡುಗಿಯರಿಂದ ದೂರವಿರಿ’’

ಭಾರತೀಯ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಪಡೆದುಕೊಳ್ಳಲು ಸೇನಾ ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ಹನಿಟ್ರ್ಯಾಪ್ ಮಾಡಲಾಗ್ತಿದೆ. ಇದಕ್ಕಾಗಿ ಚೀನಾ ಹಾಗೂ ಪಾಕಿಸ್ತಾನದ  ಸುಂದರ ಹುಡುಗಿಯರನ್ನು ಬಳಸಿಕೊಳ್ಳಲಾಗ್ತಿದೆಯಂತೆ. ಇಂಟಲಿಜೆನ್ಸ್ ಬ್ಯೂರೋ ಈ ಬಗ್ಗೆ ಭಾರತ ಸರ್ಕಾರವನ್ನು ಎಚ್ಚರಿಸಿದೆ.

ಪ್ರೇಮಿಗಳ ದಿನಕ್ಕಿಂತ ಒಂದು ದಿನ ಮೊದಲು ಐಬಿ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ. ಶತ್ರು ರಾಷ್ಟ್ರಗಳು ಭಾರತದ ಭದ್ರತಾ ಮಾಹಿತಿ ಪಡೆಯಲು ಸುಂದರ ಹುಡುಗಿಯರನ್ನು ಬಳಸುತ್ತಿವೆ. ಫೇಸ್ಬುಕ್ ಹಾಗೂ ವಾಟ್ಸಾಪ್ ಮೂಲಕ ದೇಶದ ಭದ್ರತೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ ಎಂದು ಐಬಿ ಹೇಳಿದೆ.

ಗುಪ್ತ ಮಾಹಿತಿ ಸೋರಿಕೆ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೇ ಭಾರತೀಯ ವಾಯು ಸೇನೆಯ ಗ್ರೂಪ್ ಕ್ಯಾಪ್ಟನ್ ಅರುಣ್ ವರ್ಮಾರನ್ನು ಬಂಧಿಸಲಾಗಿದೆ. ಕ್ಯಾಪ್ಟನ್ ವರ್ಮಾ ಹನಿಟ್ರ್ಯಾಪ್ ಜಾಲಕ್ಕೆ ಬಲಿಯಾಗಿದ್ದಾರೆ. ಫೇಸ್ಬುಕ್ ನಲ್ಲಿ ಇಬ್ಬರು ಮಹಿಳೆಯರ ಸಂಪರ್ಕ ಬೆಳೆಸಿದ್ದ ವರ್ಮಾ ವಾಟ್ಸಾಪ್ ನಲ್ಲಿ ಗುಪ್ತ ಮಾಹಿತಿ ಲೀಕ್ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...