alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ 4 ತಿಂಗಳಿಂದ ಆಸ್ಪತ್ರೆಯಲ್ಲಿ ಬಂಧಿಯಾಗಿದೆ ಕುಟುಂಬ

ವೈದ್ಯರನ್ನು ದೇವರಿಗೆ ಹೋಲಿಸ್ತಾರೆ. ಇತ್ತೀಚಿನ ದಿನಗಳಲ್ಲಿ ವೈದ್ಯರು ಹಾಗೂ ಆಸ್ಪತ್ರೆಗಳಿಗೆ ಹಣದ ಭೂತ ಹಿಡಿದಿದೆ. ಹಣಕ್ಕಾಗಿ ಹೆಣಕ್ಕೆ ಚಿಕಿತ್ಸೆ ನೀಡಲೂ ಕೆಲ ಆಸ್ಪತ್ರೆಗಳು ಸಿದ್ಧವಿದೆ.  ನೇಪಾಳದ ಖಾಸಗಿ ಆಸ್ಪತ್ರೆಯೊಂದು ಹಣ ನೀಡಲಿಲ್ಲ ಎನ್ನುವ ಕಾರಣ ಹೇಳಿ ಕುಟುಂಬದ ನಾಲ್ಕು ಮಂದಿಯನ್ನು 4 ತಿಂಗಳಿಂದ ಬಂಧನದಲ್ಲಿರಿಸಿದೆ.

ನೇಪಾಳದ ವಿರಾಟ ನಗರದ ಗೋಲ್ಡನ್ ಆಸ್ಪತ್ರೆ ಪೀಡಿತ ಕುಟುಂಬ ನಾಲ್ಕು ಲಕ್ಷ ರೂಪಾಯಿ ನೀಡಲಿಲ್ಲ ಎನ್ನುವ ಕಾರಣಕ್ಕೆ ಮೂವರನ್ನು ಬಂಧಿಯಾಗಿರಿಸಿಕೊಂಡಿದೆ. ಈಗಾಗಲೇ ಕುಟುಂಬದ ಸದಸ್ಯರು ಮನೆ, ಹೊಲ ಮಾರಿ 3 ಲಕ್ಷ ತೀರಿಸಿದ್ದಾರೆ. ಇನ್ನೂ ನಾಲ್ಕು ಲಕ್ಷ ರೂಪಾಯಿ ನೀಡಬೇಕೆಂಬುದು ಆಸ್ಪತ್ರೆ ವಾದ.

ಪೀಡಿತ ಸಂತೋಷ್ ಎಂಬಾತನಿಗೆ ನಾಲ್ಕು ತಿಂಗಳ ಹಿಂದೆ ಅಪರಿಚಿತರು ಹೊಡೆದಿದ್ದರು. ಗಾಯಗೊಂಡ ಸಂತೋಷ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನೀಡಿದ ಆಸ್ಪತ್ರೆ ದೊಡ್ಡ ಬಿಲ್ ನೀಡಿದೆ. ನಾಲ್ಕು ಲಕ್ಷ ನೀಡದೆ ಹೋದಲ್ಲಿ ಮೂವರ ಕಿಡ್ನಿ ತೆಗೆಯುವುದಾಗಿ ಬೆದರಿಸುತ್ತಿದೆ. ಸಂತೋಷ್ ಪತ್ನಿ ಹಾಗೂ ಸಹೋದರ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದು, ಸರ್ಕಾರಕ್ಕೆ ರಕ್ಷಣೆ ನೀಡುವಂತೆ ಮೊರೆಯಿಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...