alex Certify
ಕನ್ನಡ ದುನಿಯಾ       Mobile App
       

Kannada Duniya

20 ಕೆಜಿ ಬಂಗಾರ ತೊಟ್ಟು ಕನ್ವಾರ್ ಯಾತ್ರೆಗೆ ಹೊರಟ ಬಾಬಾ…!

ಗೋಲ್ಡನ್ ಬಾಬಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಬಾಬಾ 25ನೇ ಬಾರಿ ಕನ್ವಾರ್ ಯಾತ್ರೆಗೆ ತೆರಳಿದ್ದಾರೆ. ಪ್ರತಿ ಬಾರಿಯೂ ಗೋಲ್ಡನ್ ಬಾಬಾ ಕನ್ವಾರ್ ಯಾತ್ರೆಗೆ ಹೊರಟರೆ ಅವ್ರು ಧರಿಸುವ ಆಭರಣ ಸುದ್ದಿಯಲ್ಲಿರುತ್ತದೆ. ಪ್ರತಿ ಬಾರಿ ಹಿಂದಿನ ವರ್ಷಕ್ಕಿಂತ ಹೆಚ್ಚು ಬಂಗಾರವನ್ನು ತೊಟ್ಟು ಕನ್ವಾರ್ ಯಾತ್ರೆಗೆ ಹೊರಡುತ್ತಾರೆ ಬಾಬಾ.

ಈ ಬಾರಿ ಕೂಡ ಬಾಬಾ 20 ಕಿಲೋಗ್ರಾಂ ಬಂಗಾರದಾಭರಣ ತೊಟ್ಟು ಕನ್ವಾರ್ ಯಾತ್ರೆ ಶುರು ಮಾಡಿದ್ದಾರೆ. ಪ್ರತಿ ಬಾರಿ ಕನ್ವಾರ್ ಯಾತ್ರೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡ್ತಾರಂತೆ ಬಾಬಾ. ಒಬ್ಬ ಬಾಬಾನ ಬಳಿ ಇಷ್ಟೊಂದು ಬಂಗಾರ ಹೇಗೆ ಬಂತು ಎಂಬ ಪ್ರಶ್ನೆಗೆ ಬಾಬಾ ಇದೆಲ್ಲ ಭೋಲೇನಾಥನ ಕೃಪೆ ಎನ್ನುತ್ತಾರೆ.

ಈ ಬಾರಿ ಸುಮಾರು 6 ಕೋಟಿ ಮೌಲ್ಯದ ಬಂಗಾರದಾಭರಣ ಧರಿಸಿದ್ದಾರೆ ಗೋಲ್ಡನ್ ಬಾಬಾ. ಗಾಜಿಯಾಬಾದ್ ನ ಇಂದಿರಾಪುರಂ ಪ್ರದೇಶದಲ್ಲಿ ಐಷಾರಾಮಿ ಮನೆಯಿದೆ. ಐಷಾರಾಮಿ ಕಾರುಗಳೂ ಬಾಬಾ ಬಳಿಯಿವೆ. ಒಂದು ಬಿಎಂಡಬ್ಲ್ಯೂ, ಮೂರು ಫಾರ್ಚುನರ್, ಎರಡು ಆಡಿ ಹಾಗೂ ಎರಡು ಇನೋವಾ ಕೂಡ ಇದೆ. ಬಾಬಾ ಆಗುವ ಮೊದಲು ದೆಹಲಿಯಲ್ಲಿ ವ್ಯಾಪಾರಿಯಾಗಿದ್ದರಂತೆ ಬಾಬಾ. ಗೋಲ್ಡನ್ ಬಾಬಾ ವಿರುದ್ಧ ಕ್ರಿಮಿನಲ್ ದೂರು ದಾಖಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...