alex Certify
ಕನ್ನಡ ದುನಿಯಾ       Mobile App
       

Kannada Duniya

ಗೋಲ್ಡನ್ ಬಾಬಾನ ಹಣ, ಒಡವೆ ದೋಚಿದ ಚಾಲಕ

ಗೋಲ್ಡನ್ ಬಾಬಾ ಎಂದೇ ಖ್ಯಾತಿ ಗಳಿಸಿರುವ ಸುಧೀರ್ ಮಕಾರ್ ಅವರ ಕಾರು ಚಾಲಕ ಹಣ ಹಾಗೂ ಬಾಬಾ ಧರಿಸುತ್ತಿದ್ದ ಒಡವೆ ದೋಚಿಕೊಂಡು ಪರಾರಿಯಾಗಿದ್ದಾನೆ. ಗೋಲ್ಡನ್ ಬಾಬಾರ ಗಾಜಿಯಾಬಾದ್ ನಿವಾಸದಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್ ನಲ್ಲಿ ನಡೆಯಬೇಕಿದ್ದ ಅಖಾಡದ ಸಭೆಗೆ ಹೋಗಲು ಬಾಬಾ ಸಿದ್ದತೆ ನಡೆಸುತ್ತಿರುವಾಗಲೇ ಚಾಲಕ ಈ ಕೃತ್ಯವೆಸಗಿದ್ದಾನೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಗೋಲ್ಡನ್ ಬಾಬಾ ಪ್ಯಾಕಿಂಗ್ ಮಾಡುತ್ತಿರುವಾಗ ಚಾಲಕ ಪ್ರದೀಪ್ ಯಾದವ್ 2 ಲಕ್ಷ ರೂ. ನಗದು, ಚಿನ್ನದ ಒಡವೆ ಎತ್ತಿಕೊಂಡು ಪರಾರಿಯಾಗಿದ್ದಾನೆ. ಗೋಲ್ಡನ್ ಬಾಬಾ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಚಾಲಕನ ಪತ್ತೆ ಕಾರ್ಯ ನಡೆಸಿದ್ದಾರೆ.

ಗೋಲ್ಡನ್ ಬಾಬಾ ಸದಾ ತಮ್ಮ ಮೈಮೇಲೆ ಕೆ.ಜಿ.ಗಟ್ಟಲೇ ಚಿನ್ನ ಧರಿಸುತ್ತಿದ್ದು, ಅದರಲ್ಲೂ ಹರಿದ್ವಾರದ ಕುಂಭಮೇಳಕ್ಕೆ ತೆರಳುವ ಸಂದರ್ಭದಲ್ಲಿ 12 ರಿಂದ 13 ಕೆ.ಜಿ. ಚಿನ್ನ ಧರಿಸುತ್ತಾರೆ. ಈ ಸಂದರ್ಭದಲ್ಲಿ ತಮ್ಮ ರಕ್ಷಣೆಗಾಗಿ ಗೋಲ್ಡನ್ ಬಾಬಾ ಖಾಸಗಿ ಅಂಗರಕ್ಷಕರನ್ನೂ ನೇಮಿಸಿಕೊಳ್ಳುತ್ತಾರೆ. ಇದೀಗ ಗೋಲ್ಡನ್ ಬಾಬಾರ ಚಾಲಕನೇ 7 ಲಕ್ಷ ಮೌಲ್ಯದ ನಗ, ನಗದು ದೋಚಿಕೊಂಡು ಪರಾರಿಯಾಗಿದ್ದು, ಆತನನ್ನು ಕೇವಲ 22 ದಿನಗಳ ಹಿಂದೆ ಚಾಲಕನಾಗಿ ನೇಮಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...