alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವಂತಿದೆ ಇಲ್ಲಿ ಖರೀದಿಯಾಗಿರುವ ಚಿನ್ನ..!

goldbars-1482ಕಾಳ ಧನವನ್ನು ತಡೆಗಟ್ಟಲು ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ, ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಆದರೆ ಕಾಳ ಧನಿಕರು ತಮ್ಮಲ್ಲಿರುವ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಮಾಡಿರುವ ಹುನ್ನಾರಗಳು ಈಗ ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

500 ಹಾಗೂ 1000 ರೂ. ಮುಖಬೆಲೆ ನೋಟುಗಳು ನಿಷೇಧಗೊಂಡ ನವೆಂಬರ್ 8 ರಿಂದ ನವೆಂಬರ್ 30 ರ ಅವಧಿಯಲ್ಲಿ ಹೈದರಾಬಾದ್ ಒಂದರಲ್ಲೇ 2,700 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಯಾಗಿರುವುದು ಈಗ ಬಯಲಾಗಿದೆ.

ಅದರಲ್ಲೂ ನೋಟು ನಿಷೇಧಗೊಂಡ ನವೆಂಬರ್ 8 ರಂದು ಒಂದೆರೆಡು ಗಂಟೆಗಳ ಅವಧಿಯಲ್ಲೇ ಕೆಲ ಚಿನ್ನಾಭರಣ ಅಂಗಡಿಗಳಲ್ಲಿ ನೂರಾರು ಕೋಟಿ ರೂ. ವ್ಯವಹಾರ ನಡೆದಿರುವುದನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮುಸಾಡಿಮಲ್ ಜ್ಯೂವೆಲರ್ಸ್ ನಲ್ಲಿ ಅಂದು 100 ಕೋಟಿ ರೂ. ವ್ಯವಹಾರ ನಡೆದಿದ್ದು, ಅಂಗಡಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿಗಳನ್ನು ನಾಶಪಡಿಸಿರುವುದು ತನಿಖೆ ವೇಳೆ ಕಂಡು ಬಂದಿದೆ. ಅಕ್ಕಪಕ್ಕದ ಅಂಗಡಿಗಳ ಸಿಸಿ ಟಿವಿ ದೃಶ್ಯಾವಳಿಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದು, ಅಷ್ಟೊಂದು ಪ್ರಮಾಣದಲ್ಲಿ ಗ್ರಾಹಕರು ಬಾರದಿರುವುದು ಕಂಡು ಬಂದಿದೆ. 500 ಹಾಗೂ 1000 ರೂ. ನೋಟುಗಳನ್ನು ಬಿಳಿ ಹಣವನ್ನಾಗಿ ಪರಿವರ್ತಿಸಲು ಖರೀದಿ ಲೆಕ್ಕ ತೋರಿಸಿರಬಹುದೆಂಬ ಶಂಕೆ ಹೊಂದಿರುವ ಅಧಿಕಾರಿಗಳು, ಈಗ ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...