alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಿಯ ಗರ್ಭಗುಡಿಗೆ ಕೋಟ್ಯಾಂತರ ಮೌಲ್ಯದ ಧನ ಕನಕದಿಂದಲೇ ಅಲಂಕಾರ…!

ಆಂಧ್ರಪ್ರದೇಶದ ವಿಶಾಖಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದೇವಿಯನ್ನು ಸ್ವರ್ಣ ಹಾಗೂ ನೋಟುಗಳಿಂದಲೇ ಅಲಂಕರಿಸುತ್ತಾರೆ. ಅದೇನು ಸಾಂಕೇತಿವಾಗಿ ಒಂದೆರಡು ತೊಲೆ ಬಂಗಾರ, ಒಂದ್ಹತ್ತು ಸಾವಿರ ರೂ. ನೋಟಿನಲ್ಲಿ ಸುಧಾರಿಸಿಬಿಡುವ ಸಂಗತಿಯಲ್ಲ.

ಪ್ರತಿ ವರ್ಷ ಇಡೀ ದೇಗುಲದ ಒಳಾಂಗಣವೇ ನೂತನ ನೋಟುಗಳಿಂದ ಸಿಂಗರಿಸಲ್ಪಡುತ್ತದೆ. ಭಕ್ತರು ನೀಡಿದ ಭಾರತೀಯ ರೂಪಾಯಿಯಿಂದ ಹಿಡಿದು ಅಮೆರಿಕನ್ ಡಾಲರ್ ವರೆಗೂ ಅಲ್ಲಿ ವಿಧವಿಧವಾದ ನೋಟುಗಳನ್ನು ಸಿಂಗರಿಸುತ್ತಾರೆ.

ಈ ಬಾರಿ ಇಲ್ಲಿಗೆ ಭಕ್ತರು ನೀಡಿದ ಧನ ಮತ್ತು ಕನಕದ ಪ್ರಮಾಣ ಕೇಳಿದರೆ ನೀವು ಅಚ್ಚರಿಗೊಳ್ಳುವುದು ಗ್ಯಾರಂಟಿ. ಕಾರಣ ದೇವಿಭಕ್ತರು ಸುಮಾರು 2 ಕೋಟಿ ಮೌಲ್ಯದ 8 ಕೆ.ಜಿ. ಚಿನ್ನಾಭರಣ, 2.5 ಕೋಟಿ ಮೌಲ್ಯದ ಕರೆನ್ಸಿ ನೋಟುಗಳನ್ನು ದೇವಸ್ಥಾನಕ್ಕೆ ಸಲ್ಲಿಸಿದ್ದಾರೆ. ಧನಕನಕವನ್ನೆಲ್ಲಾ ದೇವಿಯ ಗರ್ಭಗುಡಿಯಲ್ಲಿ ರಾಶಿ ಹಾಕಲಾಗಿದ್ದು, ಮೂರ್ತಿಯ ಹಿಂದಿನ ಗೋಡೆಯಲ್ಲಿ ಒಪ್ಪ ಓರಣವಾಗಿ ಜೋಡಿಸಿಡಲಾಗಿದೆ.

ದೇವಾಲಯದ ಒಳಾಂಗಣದಲ್ಲಿ ನೋಟುಗಳಿಂದಲೇ ತೋರಣ ಕಟ್ಟಲಾಗಿದೆ. ದಸರಾ ನವರಾತ್ರಿಯ ಸಮಯದಲ್ಲಿ ಧನದ ಅಧಿದೇವತೆಯಾದ ಮಹಾಲಕ್ಷ್ಮೀಯನ್ನು ಈ ರೀತಿ ಸಿಂಗರಿಸಿದರೆ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರದ್ದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...