alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನ ಖರೀದಿದಾರರಿಗೆ ಶಾಕಿಂಗ್ ನ್ಯೂಸ್

gold jewellery

ನವದೆಹಲಿ: ಚಿನ್ನಾಭರಣಗಳ ಮೇಲೆ ಶೇ.1 ರಷ್ಟು ಅಬಕಾರಿ ಸುಂಕ ಮತ್ತು ಹೆಚ್ಚಿನ ಮೊತ್ತದ ಚಿನ್ನ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ ಮಾಡಿರುವುದನ್ನು ವಿರೋಧಿಸಿ ಚಿನ್ನಾಭರಣ ವರ್ತಕರು ಮುಷ್ಕರ ನಡೆಸಿದ್ದರು. ಇದರಿಂದ ಭಾರೀ ನಷ್ಟ ಉಂಟಾಗಿತ್ತು.

ಇದೀಗ ಚಿನ್ನಾಭರಣ ಕುರಿತ ಮತ್ತೊಂದು ಸುದ್ದಿ ಇಲ್ಲಿದೆ ನೋಡಿ. ಮದುವೆ ಸೀಸನ್ ಆಗಿರುವುದರಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಕಳೆದ 3 ದಿನಗಳಿಂದ ಏರುಗತಿಯಲ್ಲೇ ಇದ್ದ ಚಿನ್ನದ ಧಾರಣೆ 30,000 ರೂ. ಗಡಿ ದಾಟಿದೆ. ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 350 ರೂಪಾಯಿ ಏರಿಕೆ ಕಂಡಿದ್ದು, 30,250 ರೂ. ಗೆ ಹೆಚ್ಚಳವಾಗಿದೆ. ಕಳೆದ 2 ವರ್ಷಗಳಲ್ಲಿ ಇದು ಗರಿಷ್ಟ ಮಟ್ಟದ ಧಾರಣೆ ಎನ್ನಲಾಗಿದೆ. ಬೆಳ್ಳಿ ಬೆಲೆಯಲ್ಲಿಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಪ್ರತಿ ಕೆಜಿಗೆ 600 ರೂಪಾಯಿ ಹೆಚ್ಚಳವಾಗಿ 41,600 ರೂಪಾಯಿಗೆ ತಲುಪಿದೆ. ನವದೆಹಲಿಯಲ್ಲಿ 99.9 ಪರಿಶುದ್ಧ ಚಿನ್ನ 30,250 ರೂ., 99.5 ಶುದ್ಧತೆಯ ಚಿನ್ನಕ್ಕೆ 30,100 ರೂಪಾಯಿ ದರ ಇದೆ. ಜಾಗತಿಕ ಮಾರುಕಟ್ಟೆಯಲ್ಲಿನ ಪ್ರಭಾವದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...