alex Certify
ಕನ್ನಡ ದುನಿಯಾ       Mobile App
       

Kannada Duniya

ಏರುತ್ತಲೇ ಇದೆ ಬಂಗಾರದ ಬೆಲೆ

gold pr m7

ನವದೆಹಲಿ: ಬಂಗಾರದ ಬೆಲೆ ಇತ್ತೀಚೆಗೆ ಏರುಗತಿಯಲ್ಲಿ ಸಾಗಿದೆ. ಮದುವೆಯ ಸುಗ್ಗಿ, ಅಕ್ಷಯ ತೃತೀಯ ಕೂಡ ಬಂದಿರುವುದರಿಂದ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಶನಿವಾರ 225 ರೂಪಾಯಿ ಏರಿಕೆಯಾಗಿದೆ.

ಸತತವಾಗಿ ಏರುತ್ತಿರುವ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 225 ರೂಪಾಯಿ ಏರಿಕೆಯಾಗಿದ್ದು, 30,350 ರೂಪಾಯಿ ತಲುಪಿದೆ. ಇದು ಚಿನ್ನದ ಹೆಚ್ಚಿನ ಬೆಲೆಯಾಗಿದ್ದು, 2014 ರ ಮೇ 10 ರಂದು ಇದ್ದ ಬೆಲೆಯನ್ನು ತಲುಪಿದೆ. ಆ ನಂತರದಲ್ಲಿ ಚಿನ್ನದ ಬೆಲೆ ಇಳಿಕೆಯಾಗತೊಡಗಿತ್ತು. ಇದೀಗ ಮತ್ತೆ ಹಿಂದಿನ ಬೆಲೆಗೆ ಬಂದು ನಿಂತಿದೆ. ಅದೇ ರೀತಿ ಬೆಳ್ಳಿಯ ಬೆಲೆಯಲ್ಲೂ ಭಾರೀ ಹೆಚ್ಚಳವಾಗಿದೆ. ಬೆಳ್ಳಿ ಕೆಜಿಗೆ 510 ರೂಪಾಯಿ ಏರಿಕೆಯಾಗಿದ್ದು, 41,550 ರೂ.ಗೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಪರಿಣಾಮದಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಅಲ್ಲದೇ, ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ, ಒಳಿತಾಗುತ್ತದೆ ಎಂಬ ಕಾರಣದಿಂದ ಬೆಲೆ ಹೆಚ್ಚಳವಾಗಿದೆ. ಕೆಲವರು ಮೊದಲೇ ಚಿನ್ನವನ್ನು ಖರೀದಿಸಿ, ಅಂಗಡಿಯಲ್ಲಿಡುತ್ತಾರೆ. ಅಕ್ಷಯ ತೃತೀಯದಂದು ಮನೆಗೆ ಕೊಂಡೊಯ್ಯುತ್ತಾರೆ. ಇದೂ ಕೂಡ ಬೆಲೆ ಹೆಚ್ಚಲು ಕಾರಣ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...