alex Certify
ಕನ್ನಡ ದುನಿಯಾ       Mobile App
       

Kannada Duniya

ಚಿನ್ನಾಭರಣ ಖರೀದಿದಾರರಿಗೊಂದು ಸಂತಸದ ಸುದ್ದಿ

gold-mn

ನವದೆಹಲಿ: ಕೇಂದ್ರ ಸರ್ಕಾರ ಚಿನ್ನಾಭರಣಗಳ ಮೇಲೆ ಶೇ. 1ರಷ್ಟು ಅಬಕಾರಿ ಸುಂಕ ಹಾಗೂ ಹೆಚ್ಚಿನ ಮೊತ್ತದ ವ್ಯವಹಾರಕ್ಕೆ ಪಾನ್ ಕಾರ್ಡ್ ಕಡ್ಡಾಯ ಮಾಡಿದ್ದನ್ನು ವಿರೋಧಿಸಿ, ಚಿನ್ನಾಭರಣ ವರ್ತಕರು ನಡೆಸುತ್ತಿದ್ದ ಪ್ರತಿಭಟನೆ ಅಂತ್ಯಕಂಡಿದೆ.

ಕಳೆದ 18 ದಿನಗಳಿಂದ ಮುಷ್ಕರ ನಡೆಯುತ್ತಿದ್ದ ಕಾರಣ, ಖರೀದಿದಾರರಿಗೆ ಸಮಸ್ಯೆಯಾಗಿತ್ತು. ದೇಶಾದ್ಯಂತ ಚಿನ್ನಾಭರಣ ವರ್ತಕರು ಮುಷ್ಕರ ನಡೆಸಿದ್ದರಿಂದ ಗ್ರಾಹಕರಿಗೆ, ಅದರಲ್ಲಿಯೂ ಮದುವೆ ಮೊದಲಾದ ಕಾರ್ಯಗಳಿಗೆ ಚಿನ್ನಾಭರಣ ಮಾಡಿಸುವವರಿಗೆ ತೊಂದರೆಯಾಗಿತ್ತು. ಕೆಲವು ಕಡೆಗಳಲ್ಲಿ ಮುಷ್ಕರದಿಂದಾಗಿ ಮದುವೆಗೆ ಚಿನ್ನಾಭರಣ ಖರೀದಿಸಲು ಸಾಧ್ಯವಾಗಿರಲಿಲ್ಲ. ಇದೀಗ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಚಿನ್ನಾಭರಣಕ್ಕೆ ಸಂಬಂಧಿಸಿದ ವಿವಿಧ ಸಂಘಟನೆಗಳ ಪ್ರಮುಖರ ಜೊತೆಗೆ ನಡೆಸಿದ ಸಮಾಲೋಚನೆ ಯಶಸ್ವಿಯಾಗಿದೆ.

ಜೇಟ್ಲಿ ಅವರು, ಕೇಂದ್ರ ಸರ್ಕಾರ ವಿಧಿಸಿರುವ ಶೇ.1ರಷ್ಟು ಅಬಕಾರಿ ಸುಂಕವನ್ನು ಸದ್ಯಕ್ಕೆ ಹಿಂಪಡೆಯುವುದಿಲ್ಲ. ಆದರೆ, ವರ್ತಕರಿಗೆ ಅಧಿಕಾರಿಗಳಿಂದ ಯಾವುದೇ ರೀತಿಯ ಕಿರುಕುಳವಾಗದಂತೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದರಿಂದ ಮಾತುಕತೆ ಫಲಪ್ರದವಾಗಿದ್ದು, ಇಂದಿನಿಂದಲೇ ಚಿನ್ನಾಭರಣ ಮಳಿಗೆಗಳು ವಹಿವಾಟು ಆರಂಭಿಸಿವೆ.

ಮುಷ್ಕರದಿಂದಾಗಿ ಸುಮಾರು 20 ಸಾವಿರ ಕೋಟಿ ರೂ. ನಷ್ಟವಾಗಿರಬಹುದೆಂದು ಹೇಳಲಾಗಿದೆ. ಅದೇನೆ ಇರಲಿ. ದೇಶಾದ್ಯಂತ ಚಿನ್ನಾಭರಣ ಅಂಗಡಿ ಓಪನ್ ಆಗಿರುವುದರಿಂದ ಚಿನ್ನಾಭರಣ ಖರೀದಿಗೆ ಕಾಯುತ್ತಿದ್ದವರಿಗಂತೂ ಅನುಕೂಲವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...