alex Certify
ಕನ್ನಡ ದುನಿಯಾ       Mobile App
       

Kannada Duniya

ಬಂಗಾರದ ಬೆಲೆ ಕೇಳಿದ್ರೆ ತಿರುಗುತ್ತೆ ತಲೆ

gold j27

ಮುಂಬೈ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಇರುವ ಚಿನ್ನದ ಧಾರಣೆ, ಕೆಲವು ದಿನಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕಳೆದ ವಾರ ಒಂದೇ ದಿನದಲ್ಲಿ 1,215 ರೂಪಾಯಿ ಬೆಲೆ ಹೆಚ್ಚಳವಾಗಿತ್ತು. ಇದು ಒಂದೇ ದಿನದಲ್ಲಿ ಹೆಚ್ಚು ಏರಿಕೆ ಕಂಡ ದರ ಎನ್ನಲಾಗಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳ ಕಾರಣದಿಂದ ದೇಶೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ಇದೀಗ ಬ್ರಿಟನ್ ಐರೋಪ್ಯ ಒಕ್ಕೂಟದಿಂದ ಹೊರಬರುತ್ತಿರುವ ಪರಿಣಾಮ ಚಿನ್ನದ ಬೆಲೆಯಲ್ಲಿ ಹೆಚ್ಚಳವಾಗುತ್ತಿದೆ. ಬ್ರಿಟನ್ ಹೊರಬರುತ್ತಿರುವುದು ಮಾರುಕಟ್ಟೆಯಲ್ಲಿ ತಲ್ಲಣ ಮೂಡಿಸಿದ್ದು, ವರ್ಷಾಂತ್ಯಕ್ಕೆ ಚಿನ್ನದ ಬೆಲೆ 33,500 ರೂ ತಲುಪಬಹುದೆಂದು ಹೇಳಲಾಗಿದೆ. ಬ್ರಿಟನ್ ಜನತೆ ಬ್ರೆಕ್ಸಿಟ್ ಪರವಾಗಿ ಮತ ಚಲಾಯಿಸಿದ ಬೆನ್ನಲ್ಲೇ ಚಿನ್ನದ ಬೆಲೆ 30,000 ಗಡಿ ದಾಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಶೇ.8.2ರಷ್ಟು (ಡಾಲರ್) ಹೆಚ್ಚಳ ಕಂಡಿರುವ ಚಿನ್ನದ ದರದಲ್ಲಿ ಏರಿಕೆ ಕಾಣಲಿದ್ದು, ವರ್ಷಾಂತ್ಯಕ್ಕೆ 34,000 ರೂ.ನಿಂದ 35,000 ರೂ ವರೆಗೆ ಏರಿಕೆಯಾಗಬಹುದು. ಆದರೆ, ಕನಿಷ್ಠ ಬೆಲೆ 28,000 ರೂ.ಗಿಂತ ಕಡಿಮೆಯಾಗುವುದಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...