alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿದಾರರಿಗೆ ಮತ್ತೆ ಶಾಕ್ ನೀಡಿದ ಚಿನ್ನ

gold_jewelry

ನವದೆಹಲಿ: ಕಳೆದ ಕೆಲವು ದಿನಗಳಿಂದ ಏರುಗತಿಯಲ್ಲೇ ಇರುವ ಚಿನ್ನದ ದರ ಮತ್ತಷ್ಟು ಏರಿಕೆಯಾಗಿದೆ. ಬಂಗಾರ ಖರೀದಿಗೆ ಇದು ಸಕಾಲವಲ್ಲ ಎಂದು ಹೇಳಲಾಗಿದೆ. ಚಿನ್ನಾಭರಣ ಬೆಲೆಗಳಲ್ಲಿ ಏರಿಕೆಯಾಗಿದ್ದು, ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ಶಾಕ್ ನೀಡಿದೆ.

ಚಿನ್ನ ಪ್ರತಿ 10 ಗ್ರಾಂಗೆ 150 ರೂಪಾಯಿ ಏರಿಕೆಯಾಗಿದ್ದು, 30,500 ರೂಪಾಯಿಗೆ ಮುಟ್ಟಿದೆ. ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಇನ್ನೂ ಹೆಚ್ಚಾಗಬಹುದೆಂದು ಹೇಳಲಾಗಿದೆ. ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿದ್ದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು, ಹೆಚ್ಚಿನ ಮೊತ್ತದ ಚಿನ್ನಾಭರಣ ಖರೀದಿಗೆ ಪಾನ್ ಕಾರ್ಡ್ ಕಡ್ಡಾಯ ಮಾಡಿದ್ದರು. ಅಲ್ಲದೇ, ಚಿನ್ನಾಭರಣಗಳ ಮೇಲೆ ಶೇ.1 ರಷ್ಟು ಅಬಕಾರಿ ಸುಂಕ ವಿಧಿಸಿದ್ದರು. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿ, ಈ ತೀರ್ಮಾನ ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿ ಮುಷ್ಕರ ನಡೆಸಲಾಗಿತ್ತು.

ಅದಾದ ನಂತರ, ಕೇಂದ್ರ ಸರ್ಕಾರ ಜೂನ್ 1 ರಿಂದಲೇ ಜಾರಿಗೆ ಬರುವಂತೆ ಶೇ.1 ರಷ್ಟು ಅಬಕಾರಿ ಸುಂಕ ವಿಧಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಎಲ್ಲಾ ಬೆಳವಣಿಗೆಗಳ ಬಳಿಕ ಚಿನ್ನ ಖರೀದಿ ವಹಿವಾಟು ಜೋರಾಗತೊಡಗಿದ್ದು, ಬೆಲೆಯಲ್ಲಿಯೂ ಹೆಚ್ಚಳವಾಗಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...