alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಾ ! 31,000 ರೂ. ಗಡಿ ದಾಟಿದ ಚಿನ್ನ

gold 31

ನವದೆಹಲಿ: ಚಿನ್ನಾಭರಣ ಖರೀದಿಗೆ ಇದು ಸಕಾಲವಲ್ಲ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಒಂದೇ ದಿನ ಬರೋಬ್ಬರಿ 600 ರೂಪಾಯಿ ಏರಿಕೆಯಾಗುವುದರೊಂದಿಗೆ 31,000 ರೂ. ಗಡಿ ದಾಟಿದೆ.

 

ಆಭರಣ ತಯಾರಕರು, ದಾಸ್ತಾನುಗಾರರು ಹಾಗೂ ಚಿಲ್ಲರೆ ವ್ಯಾಪಾರಿಗಳು ಚಿನ್ನ ಖರೀದಿಗೆ ಮುಗಿಬಿದ್ದಿದ್ದು, ಇದರೊಂದಿಗೆ ಗ್ರಾಹಕರು ಕೂಡ ಹೆಚ್ಚಾಗಿ ಚಿನ್ನ ಖರೀದಿಸುತ್ತಿದ್ದಾರೆ. ಇದಲ್ಲದೇ ಜಾಗತಿಕ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ. ಗುರುವಾರ ಒಂದೇ ದಿನ 10 ಗ್ರಾಂ ಚಿನ್ನಕ್ಕೆ 600 ರೂಪಾಯಿ ಏರಿಕೆಯಾಗಿ 31,000 ರೂ. ಗಡಿ ದಾಟಿದೆ. 2 ದಿನಗಳ ಹಿಂದೆ 10 ಗ್ರಾಂ ಗೆ 150 ರೂ. ಏರಿಕೆಯಾಗಿ 30,500 ರೂ. ತಲುಪಿತ್ತು.

 

ಚಿನ್ನಕ್ಕೆ ಬೇಡಿಕೆ ಹೆಚ್ಚಾಗಲು ಮಾರುಕಟ್ಟೆಯಲ್ಲಿನ ಏರಿಳಿತ ಕೂಡ ಕಾರಣ. ಹೆಚ್ಚಿನ ಜನ ಬಂಗಾರದ ಮೇಲೆ ಹೂಡಿಕೆಗೆ ಆಸಕ್ತಿ ತೋರಿರುವುದು, ಅಲ್ಲದೇ, ವಿವಿಧ ಕಾರ್ಯಗಳಿಗೆ ಚಿನ್ನ ಅವಶ್ಯಕವಾಗಿರುವುದರಿಂದ ಗ್ರಾಹಕರು ಹೆಚ್ಚಾಗಿ ಚಿನ್ನ ಖರೀದಿಗೆ ಮುಂದಾಗಿದ್ದಾರೆ. ಇದರಿಂದಾಗಿ ದಿನೇ, ದಿನೇ ಬೆಲೆ ಹೆಚ್ಚಳವಾಗುತ್ತಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...