alex Certify
ಕನ್ನಡ ದುನಿಯಾ       Mobile App
       

Kannada Duniya

ಖರೀದಿದಾರರಲ್ಲಿ ಸಂತಸ ತಂದ ಚಿನ್ನ, ಬೆಳ್ಳಿ

gold nm 01

ಮುಂಬೈ: ಅಂತರರಾಷ್ಟ್ರೀಯ ಮಾರುಕಟ್ಟೆ ಮತ್ತು ದೇಶೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಕಾರಣದಿಂದ ಏರುಗತಿಯಲ್ಲಿ ಸಾಗಿದ್ದ ಚಿನ್ನ, ಶನಿವಾರದಿಂದ ಇಳಿಕೆ ಹಾದಿಯಲ್ಲಿದೆ. ಶನಿವಾರ 600 ರೂ. ಇಳಿಕೆಯಾಗಿದ್ದರೆ, ಸೋಮವಾರ 695 ರೂ. ಇಳಿಕೆಯಾಗಿದೆ.

ಸೋಮವಾರ ಮುಂಬೈನಲ್ಲಿ ಪ್ರತಿ 10 ಗ್ರಾಂ ಚಿನ್ನಕ್ಕೆ 695 ರೂ. ಇಳಿಕೆಯಾಗಿ 28,415 ರೂ. ಆಗಿತ್ತು. ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಕೆಜಿಗೆ 965 ರೂ. ಕಡಿಮೆಯಾಗಿದ್ದು, 37,210 ರೂ. ತಲುಪಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ, ರೂಪಾಯಿ ಮೌಲ್ಯ ಕುಸಿತ, ವ್ಯಾಪಾರಸ್ಥರು, ಚಿನ್ನಾಭರಣ ತಯಾರಕರು ಹೆಚ್ಚಾಗಿ ಚಿನ್ನ ಖರೀದಿಗೆ ಮುಂದಾಗಿದ್ದು ಕೂಡ ಬೆಲೆ ಏರಲು ಕಾರಣವಾಗಿತ್ತು. ಬೆಲೆ ಕಡಿಮೆಯಾದರೆ ಖರೀದಿಸಬಹುದೆಂದುಕೊಂಡಿದ್ದವರಿಗೆ ಚಿನ್ನದ ದರ ಒಂದೇ ಸಮನೆ ಏರಿಕೆಯಾಗಿದ್ದು, ಖರೀದಿಗೆ ಹಿಂದೇಟು ಹಾಕುವಂತೆ ಮಾಡಿತ್ತು.

ಇತ್ತೀಚೆಗೆ ಏರುಗತಿಯಲ್ಲಿದ್ದ ಚಿನ್ನ 11 ದಿನದಲ್ಲಿ ಬರೋಬ್ಬರಿ 2600 ರೂ. ಹೆಚ್ಚಾಗಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿತ್ತಾದರೂ ಈಗ ಇಳಿಕೆಯ ಹಾದಿಯಲ್ಲಿದೆ. ಬೇಡಿಕೆ ಕಡಿಮೆಯಾದಲ್ಲಿ ಬೆಲೆ ಇನ್ನೂ ಕಡಿಮೆಯಾಗಬಹುದೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...