alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ತೆಯಾಯ್ತು ಭಾರೀ ಪ್ರಮಾಣದ ಚಿನ್ನ

Gold-bar 45

ಮುಂಬೈ: ದಿನದಿಂದ ದಿನಕ್ಕೆ ಚಿನ್ನದ ಬೆಲೆ ಏರಿಕೆಯಾಗುತ್ತಿರುವುದು ಕಳ್ಳಸಾಗಾಣೆದಾರರಿಗೆ ಹಬ್ಬದ ಸೀಸನ್ ಬಂದಂತಾಗಿದೆ. ಬೆಲೆ ಏರಿಕೆಯಿಂದ ಸಹಜವಾಗಿಯೇ ಬೇಡಿಕೆ ಬಂದಿದ್ದು, ವಿದೇಶಗಳಿಂದ ಕಳ್ಳಸಾಗಾಣೆ ಮೂಲಕ ಚಿನ್ನ ಹೆಚ್ಚಾಗಿ ಬರುತ್ತಿದೆ.

ಮುಂಬೈ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುದಳದ ಗುಪ್ತಚರ ವಿಭಾಗದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಚಿನ್ನ ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಳ್ಳಲಾದ ಚಿನ್ನದಲ್ಲಿ 3031 ಗ್ರಾಂ ತೂಕದ 26 ಬಂಗಾರದ ಗಟ್ಟಿಗಳು ಇದ್ದು, ಇವುಗಳ ಬೆಲೆ ಅಂದಾಜು 76 ಲಕ್ಷ ರೂ. ಅಲ್ಲದೇ, 198 ಗ್ರಾಂ ತೂಕದ 18 ಚಿನ್ನದ ಬಳೆಗಳನ್ನು ವಶಕ್ಕೆ ಪಡೆದಿದ್ದು, ಇವುಗಳ ಬೆಲೆ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಬೇಡಿಕೆ ಜಾಸ್ತಿಯಾಗಿದೆ.

ವಿದೇಶಗಳಿಂದ ಚಿನ್ನ ಕಳ್ಳಸಾಗಾಣೆ ಮಾಡುವ ಪ್ರಕರಣ ಜಾಸ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಾಣೆದಾರರ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ಚಿನ್ನಕ್ಕೆ ಬೇಡಿಕೆ ಇರುವುದರಿಂದ ಕಳ್ಳ ಮಾರ್ಗಗಳ ಮೂಲಕ, ಎಲ್ಲೆಲ್ಲಿಯೋ ಬಚ್ಚಿಟ್ಟುಕೊಂಡು ಸಾಗಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...