alex Certify
ಕನ್ನಡ ದುನಿಯಾ       Mobile App
       

Kannada Duniya

ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದ ಲಿಪ್ ಸ್ಟಿಕ್ ಬಾಬಾ ಅಂದರ್

ರಾಜಸ್ತಾನ ಪೊಲೀಸರು ಸ್ವಯಂಘೋಷಿತ ದೇವಮಾನವ ಕುಲದೀಪ್ ಸಿಂಗ್ ಝಾಲಾ ಎಂಬಾತನನ್ನು ಬಂಧಿಸಿದ್ದಾರೆ. 20 ವರ್ಷದ ಯುವಕ ಯುವರಾಜ್ ಸಿಂಗ್ ಆತ್ಮಹತ್ಯೆ ಪ್ರಕರಣದಲ್ಲಿ ಈತನ ಬಂಧನವಾಗಿದೆ.

ದೇವತೆಯರಾದ ಶಕ್ತಿ ಹಾಗೂ ಜಗದಂಬೆ ತನ್ನಲ್ಲಿ ಪುನರ್ಜನ್ಮ ಪಡೆದಿದ್ದಾರೆ ಅಂತಾ ಕುಲದೀಪ್ ಹೇಳಿಕೊಳ್ತಾನೆ. ನವರಾತ್ರಿ ಸಮಯದಲ್ಲಿ ಈತ ಮಹಿಳೆಯರಂತೆ ವೇಷ ಧರಿಸಿ ಲಿಪ್ ಸ್ಟಿಕ್ ಹಚ್ಚಿಕೊಳ್ತಾನೆ. ಈತನನ್ನು ಜನ ಲಿಪ್ ಸ್ಟಿಕ್ ಬಾಬಾ ಎಂದೇ ಕರೆಯುತ್ತಾರೆ.

ಮಗನ ಸಾವಿಗೆ ಬಾಬಾ ಕಾರಣ ಅಂತಾ ಯುವರಾಜ್ ತಂದೆ ಸೋಹನ್ ಸಿಂಗ್ ಪೊಲೀಸರಿಗೆ ದೂರು ನೀಡಿದ್ದರು. ಹಲವು ವರ್ಷಗಳಿಂದ ಸೋಹನ್ ಸಿಂಗ್ ಕುಟುಂಬದವರು ಬಾಬಾನನ್ನು ಆರಾಧ್ಯ ದೈವವೆಂದು ಪೂಜಿಸುತ್ತ ಬಂದಿದ್ದಾರಂತೆ. ಆತನ ಆಶ್ರಮದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ಸಹ ಪಾಲ್ಗೊಂಡಿದ್ದಾರೆ.

ಈ ಬಾಬಾ ಹದಿಹರೆಯದ ಭಕ್ತರ ಜೊತೆಗೆ ಸೆಕ್ಸ್ ಮಾಡಿ, ಅವರಿಗೆ ನಂತರ ಕಿರುಕುಳ ಕೊಡುತ್ತಾನಂತೆ. ಈ ಮೂಲಕ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರೇರೇಪಿಸುತ್ತಾನೆ ಅನ್ನೋ ಆರೋಪವಿದೆ. ಯುವರಾಜ್ ಸಿಂಗ್ ಕೂಡ ಈತನ ಭಕ್ತನಾಗಿದ್ದ.

ಯುವತಿಯೊಬ್ಬಳ ಜೊತೆಗೆ ಆತ ನಿಶ್ಚಿತಾರ್ಥ ಮಾಡಿಕೊಳ್ಳಲು ಮುಂದಾಗಿದ್ದರಿಂದ ಬಾಬಾ ಅವನಿಗೆ ಬೆದರಿಕೆ ಹಾಕಿದ್ದ. ಹಾಗಾಗಿ ಯುವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾನಂತೆ. ಲೈಂಗಿಕವಾಗಿ ಭಕ್ತರನ್ನು ಬಳಸಿಕೊಳ್ಳುವುದು ಕೂಡ ಲಿಪ್ ಸ್ಟಿಕ್ ಬಾಬಾನ ಆಚರಣೆಯ ಒಂದು ಭಾಗ ಎಂದು ಹಲವು ಅನುಯಾಯಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದ್ರೆ ಈತ ಲೈಂಗಿಕ ದೌರ್ಜನ್ಯ ಎಸಗಿರುವುದು ಪುರುಷರ ಮೇಲೆ ಮಾತ್ರ. ಅವರಿಗೆ ಅಶ್ಲೀಲ ವಾಟ್ಸಾಪ್ ಮೆಸೇಜ್ ಕೂಡ ಕಳಿಸುತ್ತಿದ್ದ ಎಂಬ ಆರೋಪವಿದೆ. ಇದನ್ನೆಲ್ಲ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...