alex Certify
ಕನ್ನಡ ದುನಿಯಾ       Mobile App
       

Kannada Duniya

ತಿರುಪತಿಗೆ ತೆರಳಬಯಸಿರುವ ಭಕ್ತರಿಗೊಂದು ಮಾಹಿತಿ

tiru 11

ವಿಶ್ವದಲ್ಲಿಯೇ ಶ್ರೀಮಂತ ಮತ್ತು ಪ್ರಖ್ಯಾತ ದೇವಾಲಯವಾಗಿರುವ ತಿರುಪತಿ, ತಿರುಮಲಕ್ಕೆ ಯಾವಾಗಲೂ ಭಕ್ತರ ಸಂಖ್ಯೆ ಜಾಸ್ತಿ. ತಿಮ್ಮಪ್ಪನ ದರ್ಶನಕ್ಕೆ ಎಲ್ಲಾ ದಿನಗಳಲ್ಲಿಯೂ ಜನಜಾತ್ರೆಯೇ ನೆರೆದಿರುತ್ತದೆ. ನೀವೇನಾದರೂ ತಿರುಪತಿಗೆ ಹೊರಟಿದ್ದರೆ ಒಂದೆರಡು ದಿನ ಬಿಟ್ಟು ಹೋಗಿ.

ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯವನ್ನು ಬರೋಬ್ಬರಿ 14 ಗಂಟೆಗಳ ಕಾಲ ಮುಚ್ಚಲಾಗುತ್ತದೆ. ಸಾಮಾನ್ಯ ದಿನಗಳಲ್ಲಿಯೇ ಅಪಾರ ಸಂಖ್ಯೆಯ ಭಕ್ತರು ಭೇಟಿ ಕೊಡುವ ತಿರುಪತಿಯಲ್ಲಿ ಶಿವರಾತ್ರಿ ಅಂಗವಾಗಿ 80 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ಕೊಟ್ಟಿದ್ದರು. ಶ್ರೀಕಾಳ ಹಸ್ತಿಯ ದೇವಾಲಯದಲ್ಲಿ ಶಿವರಾತ್ರಿಯಂದು ಬರೋಬ್ಬರಿ 1.5 ಲಕ್ಷ ಭಕ್ತರು ಸ್ವಾಮಿಯ ದರ್ಶನ ಪಡೆದುಕೊಂಡಿದ್ದಾರೆ. ಇದೀಗ ಸೂರ್ಯಗ್ರಹಣದ ಕಾರಣ ದೇವಾಲಯ ಬಾಗಿಲು ಹಾಕಲಾಗುವುದು.

ಸೂರ್ಯಗ್ರಹಣದ ಕಾರಣದಿಂದಾಗಿ ಮಂಗಳವಾರ ರಾತ್ರಿ 8.30ರಿಂದ ಬುಧವಾರ ಮಧ್ಯಾಹ್ನದವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಟಿಟಿಡಿ ಆಡಳಿತ ಮಂಡಳಿ ತಿಳಿಸಿದೆ. ಹಾಗಾಗಿ ತಿರುಪತಿಗೆ ಹೋಗುವವರು ಎರಡು ದಿನಗಳ ನಂತರ ಹೊರಡುವುದು ಒಳ್ಳೆಯದು ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...