alex Certify
ಕನ್ನಡ ದುನಿಯಾ       Mobile App
       

Kannada Duniya

ಹೀಗೂ ಉಂಟೇ ! ಅರೆಸ್ಟಾಗಿದ್ದ ಮೇಕೆಗೆ ಸಿಕ್ತು ಬೇಲ್

goat2_2730260f

ಕೆಲವೊಮ್ಮೆ ನಂಬಲಾಗದಿದ್ದರೂ ನಂಬಲೇಬೇಕಾದ ಘಟನೆಗಳು ಜರುಗುತ್ತವೆ. ತಮಾಷೆಯಲ್ಲದ ತಮಾಷೆಯ ಘಟನೆಯೊಂದು ಛತ್ತೀಸ್ ಗಡದಲ್ಲಿ ನಡೆದಿದೆ. ಅಕ್ರಮವಾಗಿ ಗಾರ್ಡನ್ ಗೆ ನುಗ್ಗಿದ್ದ ಮೇಕೆಯನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಚತ್ತೀಸ್ ಗಡ ರಾಜ್ಯದ ರಾಯ್ ಪುರ್ ಸಮೀಪದ ಕೊರಿಯ್ ಎಂಬಲ್ಲಿ ಜಿಲ್ಲಾ ನ್ಯಾಯಾಧೀಶರ ಗಾರ್ಡನ್ ಗೆ ಏಕಾಏಕಿ ಮೇಕೆಯೊಂದು ನುಗ್ಗಿದ್ದು, ಅಲ್ಲಿದ್ದ ಗಿಡ ಮೊದಲಾದವುಗಳನ್ನು ಹಾಳುಗೆಡವಿತ್ತು. ಇದರಿಂದ ಆಕ್ರೋಶಗೊಂಡ ಜಿಲ್ಲಾ ನ್ಯಾಯಾಧೀಶರಾದ ಹೇಮಂತ್, ಮನೆಯ ತೋಟಕ್ಕೆ ನುಗ್ಗಿದ್ದ ಮೇಕೆ ಮತ್ತು ಅದರ ಮಾಲೀಕನ ಮೇಲೆ ದೂರು ದಾಖಲಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮೇಕೆಯನ್ನು ಹಾಗೂ ಮಾಲೀಕ ಅಬ್ದುಲ್ ಹಸನ್ ಅವರನ್ನು ಬಂಧಿಸಿದ್ದರು.

ಜಾಮೀನಿನ ಮೇಲೆ ಮೇಕೆ ಹಾಗೂ ಮಾಲೀಕ ಬಿಡುಗಡೆಯಾಗಿದ್ದಾರೆ. ನ್ಯಾಯಾಧೀಶರ ಮನೆಗೆ ಪದೇ, ಪದೇ ಮೇಕೆ ನುಗ್ಗಿ ಹಾಳು ಮಾಡುತ್ತಿದ್ದ ಕಾರಣ ಹಲವು ಬಾರಿ ಸೂಚನೆ ನೀಡಲಾಗಿತ್ತು. ಆದರೆ, ಮಾಲೀಕ ಹಸನ್ ನಿರ್ಲಕ್ಷ್ಯ ತೋರಿದ್ದರಿಂದ ಹೀಗೆ ಮಾಡಲಾಗಿದೆ. ಕ್ರಿಮಿನಲ್ ಆರೋಪ ಎದುರಿಸುವ ಸಾಧ್ಯತೆ ಇದ್ದು, ವಿಚಾರಣೆ ನಂತರ ಶಿಕ್ಷೆ ವಿಧಿಸಿದರೂ ವಿಧಿಸಬಹುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...