alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದ ಮೀನುಗಾರರಿಗೆ ಖುಷಿ ಸುದ್ದಿ ಕೊಟ್ಟ ಗೋವಾ ಸರ್ಕಾರ

ಹೊರ ರಾಜ್ಯಗಳ ಮೀನು ಪೂರೈಕೆ ಮೇಲೆ ನಿರ್ಬಂಧ ಹೇರಿದ್ದ ಗೋವಾ ಸರ್ಕಾರ ಕೆಲವು ನಿಬಂಧನೆಗಳೊಂದಿಗೆ ಈ ನಿಯಮವನ್ನು ಸಡಿಲಿಸಿದ್ದು, ಇದು ರಾಜ್ಯದ ಮೀನುಗಾರರಿಗೆ ನೆಮ್ಮದಿ ತಂದಿದೆ.

ಗೋವಾದಿಂದ 60 ಕಿಲೋ ಮೀಟರ್ ವ್ಯಾಪ್ತಿಯ ಮೀನುಗಾರರು ಮೀನು ಪೂರೈಸಲು ಈಗ ಅವಕಾಶ ಕಲ್ಪಿಸಲಾಗಿದ್ದು, ಇದರಿಂದಾಗಿ ಕರ್ನಾಟಕದ ಕಾರವಾರ ಹಾಗೂ ಮಹಾರಾಷ್ಟ್ರದ ಸಿಂಧುದುರ್ಗ ಭಾಗದ ಮೀನುಗಾರರಿಗೆ ಅನುಕೂಲವಾಗಲಿದೆ.

ರಾಜ್ಯದ ಮೀನುಗಾರರಿಗೆ ನೆರವಾಗುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗೋವಾಕ್ಕೆ ಮೀನು ಪೂರೈಕೆಗೆ ಅವಕಾಶ ಕಲ್ಪಿಸಿಕೊಡುವಂತೆ ಕೆಲ ದಿನಗಳ ಹಿಂದೆ ಗೋವಾ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದಕ್ಕೆ ಸ್ಪಂದನೆ ಸಿಕ್ಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...