alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರದಲ್ಲಿ ಕೆಟ್ಟು ನಿಂತ ಬೋಟ್: ಕನ್ನಡಿಗರ ಪರದಾಟ

ಗೋವಾ ಪ್ರವಾಸಕ್ಕೆ ತೆರಳಿದ್ದ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಣಜಿ ಬಳಿ ಸಮುದ್ರದಲ್ಲಿ ಬೋಟ್ ಕೆಟ್ಟು ನಿಂತಿದ್ದು, 45 ಮಂದಿ ಪ್ರವಾಸಿಗರು 3 ಗಂಟೆಯಿಂದ ಸಮುದ್ರದಲ್ಲೇ ಇದ್ದಾರೆ.

ನೆರವಿಗಾಗಿ ಮನವಿ ಮಾಡಿದ್ದರೂ, ಗೋವಾ ಪೊಲೀಸರು ಸ್ಪಂದಿಸಿಲ್ಲ. ರಾಯ್ ಬಂದರ್ ಸಮುದ್ರದಲ್ಲಿ 3 ತಾಸುಗಳಿಂದ ಬೋಟ್ ನಿಂತಿದ್ದು, ಯಾರೂ ನೆರವಿಗೂ ಬಂದಿಲ್ಲ.

ಬೋಟ್ ಸಂಸ್ಥೆಯವರು, ಗೋವಾ ಪೊಲೀಸರು ಬರುವುದಾಗಿ ಗಂಟೆಗಳ ಅವಧಿಯಿಂದ ಹೇಳುತ್ತಿದ್ದಾರೆ. ಬೋಟ್ ನಲ್ಲಿರುವ ಮಕ್ಕಳು, ಮಹಿಳೆಯರು ಭಯದಲ್ಲಿದ್ದು, ಯಾರಾದರೂ ನೆರವಿಗೆ ಬರುವಂತೆ ಪ್ರವಾಸಿಗರು ಫೋನ್ ಮೂಲಕ ಸಂಪರ್ಕಿಸಿ ಮನವಿ ಮಾಡಿದ್ದಾರೆ. ಊಟ, ತಿಂಡಿ, ನೀರಿಲ್ಲದೇ, ಪ್ರವಾಸಿಗರು ಪರದಾಡಿದ್ದಾರೆ.

ಮೂರೂವರೆ ತಾಸಿನ ಬಳಿಕ ಮತ್ತೊಂದು ಬೋಟ್ ಬಂದಿದ್ದು, ಹಗ್ಗದ ನೆರವಿನಿಂದ ಕೆಟ್ಟು ನಿಂತ ಬೋಟ್ ಎಳೆದೊಯ್ಯುವ ಪ್ರಯತ್ನ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...