alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡುಕರಿಗೆ ಪಾಠ ಕಲಿಸಲು ಹೊರಟ ಗೋವಾ ಸಿಎಂ

ಗೋವಾ ಸಿಎಂ ಮನೋಹರ್ ಪರಿಕ್ಕರ್ ಮಹತ್ವದ ಆದೇಶವೊಂದನ್ನ ಜಾರಿ ಮಾಡುವ ಸಂಬಂಧ ಸಾರ್ವಜನಿಕರಿಗೆ ಈಗಾಗ್ಲೇ ಸೂಚನೆಯೊಂದನ್ನ ನೀಡಿದ್ದಾರೆ. ಆ ಪ್ರಕಾರ ಆಗಸ್ಟ್ 15ರಿಂದ ಗೋವಾದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡೋದು ಶಿಕ್ಷಾರ್ಹ ಅಪರಾಧವಾಗಿದೆ. ಪಾದಚಾರಿ ಮಾರ್ಗ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡೋರಿಗೆ ಭಾರಿ ದಂಡವನ್ನ ವಿಧಿಸಲಾಗುತ್ತದೆಯಂತೆ.

ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ಆರ್ಥಿಕಾಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮದಲ್ಲಿ ಮಾತನಾಡಿದ ಪರಿಕ್ಕರ್, ಗೋವಾ ನಾಗರಿಕರು ಸಾಮಾಜಿಕ ಪ್ರಜ್ಞೆಯನ್ನ ಬೆಳೆಸಿಕೊಳ್ಳಬೇಕಿದೆ. ಪಾದಚಾರಿ ಮಾರ್ಗಗಳಿರೋದು ಮದ್ಯಪಾನ ಮಾಡೋರಿಗೋ , ಕಸ ಎಸೆಯುವವರಿಗೋ ಅಲ್ಲ. ಹಾಗಾಗಿ ಆಗಸ್ಟ್ 15ರಿಂದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನದ ಮೇಲೆ ನಿಷೇಧ ಹೇರಲಾಗ್ತಿದೆ. ಅಷ್ಟೇ ಅಲ್ಲ ಇದಕ್ಕಾಗಿ ಭಾರೀ ದಂಡವನ್ನು ವಿಧಿಸಲಾಗುತ್ತೆ ಅಂತ ಹೇಳಿದ್ದಾರೆ.

ವಿಧಿಸಲಾಗುವ ದಂಡದ ಮೊತ್ತ ಎಷ್ಟು ಅನ್ನೋದನ್ನ ಪರಿಕ್ಕರ್ ತಿಳಿಸಿಲ್ಲ. ಮದ್ಯಪಾನದ ಜೊತೆಗೆ ಪ್ಲಾಸ್ಟಿಕ್ ಬ್ಯಾಗ್ ಗಳ ಬಳಕೆಗೆ ವಿಧಿಸಿರುವ ದಂಡದ ಮೊತ್ತ 100 ರೂಪಾಯಿಯಿಂದ 2500 ರೂಪಾಯಿಗೆ ಹೆಚ್ಚಾಗಲಿದೆ ಅಂತ ಪರಿಕ್ಕರ್ ತಿಳಿಸಿದ್ದಾರೆ. ಮಾಂಡೋವಿ ನದಿಗೆ ಸಾರ್ವಜನಿಕರು ಎಸೆಯುತ್ತಿರುವ ಹೂವು ಮತ್ತಿತರ ಪ್ಲಾಸ್ಟಿಕ್ ತ್ಯಾಜ್ಯಗಳ ವಿರುದ್ಧವೂ ಪರಿಕ್ಕರ್ ಗರಂ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...