alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರಗ್ ಮಾಫಿಯಾದಿಂದ ಸಚಿವರಿಗೆ ಬೆದರಿಕೆ

ಪಣಜಿ: ಗೋವಾದ ಜಲಸಂಪನ್ಮೂಲ ಖಾತೆ ಸಚಿವ ವಿನೋದ್ ಪಾಲ್ಯೇಕಾರ್ ಅವರಿಗೆ ಡ್ರಗ್ ಮಾಫಿಯಾದಿಂದ ಜೀವ ಬೆದರಿಕೆ ಇದೆ.

ಸ್ಥಳೀಯ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಸಚಿವರು, ಇದನ್ನು ಸ್ಪಷ್ಟಪಡಿಸಿದ್ದು, ಅವರಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಸಿಯೊಲಿಮ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಿನೋದ್, ಗೋವಾ ಫಾರ್ವರ್ಡ್ ಪಾರ್ಟಿಯ ಮುಖಂಡರಾಗಿದ್ದಾರೆ. ಗೋವಾ ಕರಾವಳಿ ಪ್ರದೇಶಗಳಲ್ಲಿ ಡ್ರಗ್ ಮಾಫಿಯಾಗೆ ಅವರು ಕಡಿವಾಣ ಹಾಕಿದ್ದಾರೆ.

ಬೀಚ್ ಪಾರ್ಟಿಗಳಲ್ಲಿ ಡ್ರಗ್ ಮಾಫಿಯಾಗೆ ನಿರ್ಬಂಧ ಹೇರಿದ್ದರಿಂದ ವಿನೋದ್ ಅವರಿಗೆ ಬೆದರಿಕೆ ಬಂದಿದೆ. ವಾಕಿಂಗ್ ಹೋದ ಸಂದರ್ಭದಲ್ಲಿ ತಮ್ಮನ್ನು ಅಪರಿಚಿತರು ಹಿಂಬಾಲಿಸಿದ್ದಾರೆ ಎಂದು ವಿನೋದ್ ಹೇಳಿದ್ದು, ಭದ್ರತಾ ಸಮಿತಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುವಂತೆ ಗುಪ್ತಚರ ಇಲಾಖೆಗೆ ಸೂಚಿಸಿದ್ದು, ವಿನೋದ್ ಅವರಿಗೆ ನೀಡಲಾಗಿರುವ ಭದ್ರತೆಯನ್ನು ಹೆಚ್ಚಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...