alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಮಂತ್ರ ಜಪಿಸಿ, ಉತ್ತಮ ಫಸಲು ಪಡೆಯಿರಿ

ಗೋವಾ ಬಿಜೆಪಿ ನೇತೃತ್ವದ ಸರ್ಕಾರ ಉತ್ತಮ ಬೆಳೆಗಾಗಿ ವೈದಿಕ ತಂತ್ರವನ್ನು ಪ್ರಾರಂಭಿಸಿದೆ. ರೈತರು ಉತ್ತಮ ಫಸಲಿಗಾಗಿ ದಿನಕ್ಕೆ 20 ನಿಮಿಷಗಳ ಕಾಲ ಮಂತ್ರ ಜಪಿಸಬೇಕೆಂದು ಹೇಳಲಾಗಿದೆ. ಓಂ ರೋಮ್ ಜಮ್ ಸಹ ಮಂತ್ರವನ್ನು ಜಪಿಸಿದ್ರೆ ಕಾಸ್ಮಿಕ್ ಶಕ್ತಿ ಹೆಚ್ಚಾಗುತ್ತದೆ ಎಂದು ಸರ್ಕಾರ ಹೇಳಿದೆ.

ಗೋವಾದ ಕೃಷಿ ಮಂತ್ರಿ ವಿಜಯ್ ಸರ್ದೇಸಾಯಿ ಮಂಗಳವಾರ ತಮ್ಮ ನಿವಾಸದ ಬಳಿಯಿರುವ ತೋಟದಲ್ಲಿ ಪೈಲಟ್ ಯೋಜನೆಗೆ ಚಾಲನೆ ನೀಡಿದ್ದಾರೆ. ಇದಕ್ಕೆ ಶಿವ ಯೋಗ ಕಾಸ್ಮಿಕ್ ಫಾರ್ಮಿಂಗ್ ಎಂದು ಹೆಸರಿಡಲಾಗಿದೆ. ಕೆಮಿಕಲ್ ಇಂಜಿನಿಯರ್ ನಿಂದ ತಾಂತ್ರಿಕರಾಗಿರುವ ಡಾಕ್ಟರ್ ಅವಧೂತ ಶಿವಾನಂದ್ ನೇತೃತ್ವದ ಶಿವ ಯೋಗ ಪೌಂಡೇಶನ್ ಇದನ್ನು ವಿನ್ಯಾಸಗೊಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಶಕ್ತಿ ವಿಡಿಯೋ ವೈರಲ್ ಆಗಿದೆ. ಸಚಿವರ ಪತ್ನಿ ಉಷಾ ಈ ಪೌಂಡೇಶನ್ ಅನುಯಾಯಿ ಎನ್ನಲಾಗಿದೆ. ಇದಕ್ಕೆ ಒಂದು ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಕೃಷಿ ಮಂತ್ರಿಯಾಗಿರುವ ನಾನು ಕೃಷಿ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ನನಗೆ ಇದ್ರಿಂದ ಖುಷಿಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಸೌಂದರ್ಯ ಸ್ಪರ್ಧೆ ಅಥವಾ ರಾಕ್ ಶೋ ಮೂಲಕ ಜನರನ್ನು ಕೃಷಿಯತ್ತ ಸೆಳೆಯುವ ಅವಕಾಶ ಸಿಕ್ಕರೆ ನಾನು ಅದನ್ನೂ ಮಾಡುತ್ತೇನೆಂದು ಸಚಿವರು ಹೇಳಿದ್ದಾರೆ. ಶಿವಾನಂದ್ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ವರ್ಕ್ ಶಾಪ್ ನಲ್ಲಿ ಪಾಲ್ಗೊಂಡಿದ್ದ ಸಚಿವರು ಇದ್ರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದ ನಂತ್ರ ಪೈಲೆಟ್ ಯೋಜನೆಗೆ ಚಾಲನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...