alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿಯವರ ಹೆಸರನ್ನು ಗಿನ್ನಿಸ್ ದಾಖಲೆಗೆ ಸೇರಿಸಿ ಎಂದ ಕಾಂಗ್ರೆಸ್, ಕಾರಣವೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿಯವರ ನಾಲ್ಕು ವರ್ಷಗಳ ವಿದೇಶಿ ಪ್ರವಾಸದ ಬಗ್ಗೆ ಗೋವಾ ಕಾಂಗ್ರೆಸ್ ನ ಕಾರ್ಯಾಧ್ಯಕ್ಷ ಸಂಕಲ್ಪ್ ಅಮೋಲ್ಕರ್ ಕೊಂಕು ಮಾತುಗಳನ್ನಾಡಿದ್ದಾರೆ. ಪ್ರಧಾನಿಯವರ ವಿದೇಶಿ ಪ್ರಯಾಣವನ್ನ ಗಿನ್ನಿಸ್ ದಾಖಲೆಗೆ ಸೇರಿಸಿ ಅಂತ ಇಂಗ್ಲೆಂಡ್ ನ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಅಧಿಕಾರಿಗಳಿಗೆ ಪತ್ರ ಬರೆದಿರೋದಾಗಿ ಸಂಕಲ್ಪ್ ಅಮೋಲ್ಕರ್ ಹೇಳಿದ್ದಾರೆ.

ಗಿನ್ನಿಸ್ ದಾಖಲೆಗೆ ಮೋದಿಯವರ ಹೆಸರನ್ನು ಸೂಚಿಸಿರೋದಕ್ಕೆ ನಮಗೆ ಸಂತಸವಾಗುತ್ತಿದೆ. ದೇಶದ ಆರ್ಥಿಕ ಸಂಪನ್ಮೂಲವನ್ನ ವಿದೇಶಿ ಪ್ರಯಾಣಕ್ಕೆ ಹೇಗೆ ಬಳಸಿಕೊಳ್ಳಬಹುದು ಅನ್ನೋ ಸಾಧನೆಯನ್ನ ಪ್ರಧಾನಿ ಮಾಡಿದ್ದಾರೆ. 41 ಪ್ರಯಾಣಗಳಲ್ಲಿ 52 ದೇಶಗಳನ್ನು ಸುತ್ತಿರುವ ಮೋದಿ ಇದಕ್ಕಾಗಿ 355 ಕೋಟಿ ರೂಪಾಯಿಗಳನ್ನ ಖರ್ಚು ಮಾಡಿದ್ದಾರೆಂದಿದ್ದಾರೆ ಸಂಕಲ್ಪ್ ಅಮೋಲ್ಕರ್.

ಭಾರತದ ಮುಂದಿನ ಪೀಳಿಗೆಗೆ ಈ ಮೂಲಕ ಅವರು ಆದರ್ಶವಾಗಿದ್ದಾರೆ ಅಂತ ಅಮೋಲ್ಕರ್ ಕುಹಕವಾಡಿದ್ದಾರೆ. ದೇಶದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಳ್ಳೋದಕ್ಕಿಂತ ಹೆಚ್ಚಾಗಿ ವಿದೇಶಿ ಪ್ರವಾಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿರುವ ಬಿಜೆಪಿ ಸರ್ಕಾರದ ನಡೆ ದುರಾದೃಷ್ಟಕರ ಎಂದು ಅಮೋಲ್ಕರ್ ವ್ಯಂಗ್ಯವಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...