alex Certify
ಕನ್ನಡ ದುನಿಯಾ       Mobile App
       

Kannada Duniya

‘ದ್ವಾಪರ ಯುಗದಲ್ಲಿಯೇ ಇತ್ತು ಕ್ಯಾಶ್ ಲೆಸ್ ವ್ಯವಹಾರ’

cm-yogi

ಲಖ್ನೋ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ದೇಶದಲ್ಲಿ ಕ್ಯಾಶ್ ಲೆಸ್ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

ಕ್ಯಾಶ್ ಲೆಸ್ ವ್ಯವಹಾರ ಈಗಲ್ಲ, ದ್ವಾಪರಯುಗದಲ್ಲಿಯೇ ಇತ್ತು. ಪುರಾಣದಲ್ಲಿಯೇ ಇದನ್ನು ಗಮನಿಸಬಹುದಾಗಿದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಪಂಚಾಯತ್ ರಾಜ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಕ್ಯಾಶ್ ಲೆಸ್ ವ್ಯವಹಾರಕ್ಕೆ ದ್ವಾಪರಯುಗದ ನಂಟು ಬೆಸೆದಿದ್ದಾರೆ.

ಶ್ರೀಕೃಷ್ಣನ ಬಳಿ ಬಂದಿದ್ದ ಸುಧಾಮ ಏನಾದರೂ ಸಹಾಯ ಸಿಗಬಹುದೆಂದು ಕಾಯುತ್ತಾನೆ. ಆದರೆ, ಕೃಷ್ಣ ಸುಧಾಮನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾನೆ ವಿನಹ, ಯಾವುದೇ ನೆರವು ನೀಡುವುದಿಲ್ಲ. ಸುಧಾಮ ನಿರಾಸೆಯಿಂದ ಮನೆಗೆ ಬಂದಾಗ ಅವನಿಗೆ ಅಚ್ಚರಿಯಾಗಿತ್ತು. ಅವನ ಗುಡಿಸಲು ಮನೆ ಅರಮನೆಯಾಗಿ ಬದಲಾಗಿತ್ತು. ಇದು ಶ್ರೀಕೃಷ್ಣನ ಕಾಲವೂ ಕ್ಯಾಶ್ ಲೆಸ್ ಆಗಿತ್ತು ಎಂಬುದನ್ನು ತೋರಿಸುತ್ತದೆ ಎಂದು ಯೋಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...